ಸುಳ್ಯ: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ತೆರೆ ಬೀಳುವ ಮೊದಲು ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸುಳ್ಯ ನಗರದಲ್ಲಿ ಪಾದಯಾತ್ರೆಯ ಮೂಲಕ ಮತ ಯಾಚನೆ ನಡೆಸಿದರು. ಸುಳ್ಯ ಜ್ಯೋತಿ ವೃತ್ತದಿಂದ
ಆರಂಭಗೊಂಡ ಪಾದಯಾತ್ರೆ ಮತ್ತು ಮತಯಾಚನೆ ಗಾಂಧಿನಗರ ತನಕ ಸಾಗಿತು. ಪ್ರತಿ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮನವಿ ಪತ್ರ ನೀಡಿ ಮತ ಯಾಚನೆ ಮಾಡಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಮುಖಂಡರಾದ ಎಸ್.ಎನ್.ಮನ್ಮಥ, ಚನಿಯ ಕಲ್ತಡ್ಕ, ಬಾಲಗೋಪಾಲ ಸೇರ್ಕಜೆ, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ಮಹೇಶ್ ಕುಮಾರ್ ಮೇನಾಲ, ಕುಸುಮಾಧರ ಎ.ಟಿ, ಪಿ.ಕೆ.ಉಮೇಶ್, ಚಿದಾನಂದ ಕುದ್ಪಾಜೆ, ಗಿರೀಶ್ ಕಲ್ಲುಗದ್ದೆ, ಜಗದೀಶ್, ಕಿಶೋರಿ ಶೇಟ್, ಶೀಲಾವತಿ ಮಾಧವ ಮತ್ತಿತರರು ಉಪಸ್ಥಿತರಿದ್ದರು.