ಸುಳ್ಯ:ಚುನಾವಣಾ ಪ್ರಚಾರದ ಅಂಗವಾಗಿ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ಅವರ ಪರವಾಗಿ ರೋಡ್ ಶೋ ಮಾಡಿ ಮತ ಯಾಚನೆ ನಡೆಸಿದರು. ಪೈಚಾರ್ನಿಂದ ಆರಂಭಗೊಂಡ ರೋಡ್ ಶೋ ಹಾಗೂ ಮತ ಯಾಚನೆ ನಗರದಲ್ಲಿ ನಡೆಯಿತು.ಪೈಚಾರ್ನಿಂದ ಗಾಂಧಿನಗರದವರೆಗೆ ಮತದಾರರನ್ನು ಭೇಟಿ ಮಾಡಿ ಮತ ಯಾಚನೆ ಮಾಡಿದರು.ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ
ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್
ರಾಜ್ಯದಲ್ಲಿ ಜೆಡಿಎಸ್ ಪರವಾದ ಅಲೆ ಇದೆ. ರಾಜ್ಯದಲ್ಲಿ ಜೆಡಿಎಸ್ ಸರಕಾರ ಬರಲಿದ್ದು, ಕ್ಷೇತ್ರದಲ್ಲಿಯೂ ಜೆಡಿಎಸ್ನ್ನು ಮತದಾರರು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಜನರು ಬೆಲೆ ಏರಿಕೆಯಿಂದ ರೋಸಿ ಹೋಗಿದ್ದಾರೆ. ಜನಪರ ಹಾಗೂ ರೈತಪರವಾಗಿರುವ ಪಕ್ಷ ಜೆಡಿಎಸ್ ಮಾತ್ರ. ಕುಮಾರ ಸ್ವಾಮಿ ಸರಕಾರ ಈ ಹಿಂದೆ ಮಾಡಿರುವ ಜನಪರ ಯೋಜನೆಯನ್ನು ಜನರು ನೆಚ್ಚಿಕೊಂಡಿದೆ. ಈಗಾಗಲೇ ಪಂಚರತ್ನ ಯೋಜನೆಯನ್ನು ಜನರಿಗಾಗಿ ತಂದಿದ್ದಾರೆ. ಇದೆಲ್ಲವನ್ನು ಜನರು ನೆಚ್ಚಿಕೊಂಡಿದ್ದು, ಈ ಬಾರಿ ಗೆಲ್ಲಿಸುತ್ತಾರೆಂಬ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕನ್ಯಾಕುಮಾರಿ, ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಪ್ರಮುಖರಾದ ಮಂಜಪ್ಪ ರೈ, ಉದಯಕುಮಾರ್ ದೇರಪ್ಪಜ್ಜನಮನೆ, ಲೋಲಾಕ್ಷ ಕಾರಿಂಜ,ದೇವರಾಮ ಬಾಳೆಕಜೆ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ರೋಹನ್ ಪೀಟರ್, ಜ್ಯೋತಿ ಪ್ರೇಮಾನಂದ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಹಾಲಕ್ಷ್ಮಿ ಕೊರಂಬಡ್ಕ, ರಾಮಚಂದ್ರ ಬಳ್ಳಡ್ಕ, ಚೋಮ ನಾವೂರು, ಹಸೈನಾರ್ ಅಜ್ಜಾವರ ಮೊದಲಾದವರಿದ್ದರು.