ಸುಳ್ಯ: ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿರುವ ಹಿನ್ನಲೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಬೃಹತ್ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡರು. ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ತೆರೆದ ವಾಹನದಲ್ಲಿ ಸಂಚರಿಸಿ ಸಾರ್ವಜನಿರಲ್ಲಿ ಮತ ಯಾಚನೆ ಮಾಡಿದರು. ಗಾಂಧಿನಗರದಿಂದ ಹಳೆಗೇಟು ತನಕ ತನಕ ರೋಡ್ ಶೋ ಮೂಲಕ
ಪ್ರಚಾರ ಮಾಡಲಾಯಿತು. ಕಾರ್ಯಕರ್ತರು ಹಾಗೂ ಮುಖಂಡರು ಮನವಿ ಪತ್ರ, ಅಭ್ಯರ್ಥಿ ಪರಿಚಯ ಪ್ರಣಾಳಿಕೆ ಪ್ರತಿಗಳನ್ನು ಅಂಗಡಿ ಮುಂಗಟ್ಟುಗಳಿಗೆ ನೀಡಿ ಮತ ಯಾಚನೆ ಮಾಡಿದರು. ಗಾಂಧಿನಗರದಲ್ಲಿ ಪಾದಯಾತ್ರೆಗೆ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಚಾಲನೆ ನೀಡಿದರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬರುವುದು ನಿಶ್ಚಿತ ಎಂದು ಅವರು ಹೇಳಿದರು. 130 ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ,ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಕಾಂಗ್ರೆಸ್ ಉಸ್ತುವಾರಿ ಎಂ.ವೆಂಕಪ್ಪ ಗೌಡ, ಎಸ್.ಸಂಶುದ್ದೀನ್, ಸರಸ್ವತಿ ಕಾಮತ್, ಕೆ.ಎಂ.ಮುಸ್ತಫ, ರಾಜೀವಿ ಆರ್.ರೈ, ಸೋಮಶೇಖರ ಕೊಯಿಂಗಾಜೆ, ವಹಿದಾ ಇಸ್ಮಾಯಿಲ್, ಮಹಮ್ಮದ್ ಕುಂಞಿ ಗೂನಡ್ಕ, ಮತ್ತಿತರರು ಉಪಸ್ಥಿತರಿದ್ದರು.