ಬೆಂಗಳೂರು:ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಿಗ್ ಬಾಸ್’ 11ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರು ಬಡ್ನಿ ಗ್ರಾಮದ ನಿವಾಸಿ ಹನುಮಂತ ಲಮಾಣಿ ಅವರು ವಿಜಯಿಯಾಗಿದ್ದಾರೆ.ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಹನುಮಂತ ಗೆಲುವು ಸಾಧಿಸಿದ್ದಾರೆ.ರನ್ನರ್ ಅಪ್ ಆಗಿ
ತ್ರಿವಿಕ್ರಮ್ ಹೊರಹೊಮ್ಮಿದ್ದಾರೆ.ಶನಿವಾರ ನಡೆದ ಸಂಚಿಕೆಯಲ್ಲಿ ಭವ್ಯಗೌಡ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದರು. ಫಿನಾಲೆ ದಿನಕ್ಕೆ ಉಗ್ರಂ ಮಂಜು, ರಜತ್, ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ ಪ್ರವೇಶಿಸಿದ್ದರು.ಭಾನುವಾರ ನಡೆದ ಸಂಚಿಕೆಯಲ್ಲಿ ಉಗ್ರಂ ಮಂಜು, ರಜತ್, ಮೋಕ್ಷಿತಾ ಪೈ ಹೊರ ಹೋದರು. ಅಂತಿಮವಾಗಿ ತ್ರಿವಿಕ್ರಮ್ ಮತ್ತು ಹನುಮಂತನ ನಡುವೆ ಪೈಪೋಟಿ ನಡೆಯಿತು.
ಹನುಮಂತ ಟ್ರೋಫಿಯೊಂದಿಗೆ 50 ಲಕ್ಷ ತಮ್ಮದಾಗಿಸಿಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟ ಅಂತಿಮ ಬಿಗ್ಬಾಸ್ ಶೋ ಇದಾಗಿದೆ. 17 ಸ್ಪರ್ಧಿಗಳು ಭಾಗವಹಿಸಿದ್ದರು. ಸಿನಿಮಾ, ಧಾರಾವಾಹಿ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು.