ಪೆರಾಜೆ:ಪೆರಾಜೆಯ ಮಸೀದಿ ಬಳಿ ಇರುವ ಕ್ಯಾಂಟಿನ್ಗೆ ಕಾರೊಂದು ನುಗ್ಗಿದ ಪರಿಣಾಮ ಮೂರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಇಂದು ಸಂಜೆ ಈ ಘಟನೆ ನಡೆದಿದ್ದು, ಮಡಿಕೇರಿ ಕಡೆಯಿಂದ ಬಂದ ಕಾರು ರಸ್ತೆ ಬದಿಯ ಕ್ಯಾಂಟಿನ್ಗೆ ನುಗ್ಗಿ ಡಿಕ್ಕಿ ಹೊಡೆದ ಕಾರಣ ಚಹಾ ಕುಡಿಯುತ್ತಿದ್ದ ಇಬ್ಬರು ಹಾಗೂ ಕ್ಯಾಂಟೀನ್ ಮಾಲಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಒಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.