ಸುಳ್ಯ:ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 10ನೇ ರ್ಯಾಂಕ್ ಹಾಗೂ ಸುಳ್ಯ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಶಾರದಾ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನುಷ್ಯ ಅವರಿಗೆ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ದ.ಕ.ಗೌಡ ವಿದ್ಯಾ ಸಂಘ ವಿದ್ಯಾ ಸಂಘ ಕೊಡ ಮಾಡುವ ಚಿನ್ನದ ಪದಕಕ್ಕೆ
ಭಾಜನರಾದ ಅನುಷ್ಯರನ್ನು ಸನ್ಮಾನಿಸಿದ ದ.ಕ.ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ಮಾತನಾಡಿ ‘ಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳ ಆಶಾಕಿರಣವಾದ ಶ್ರೀ ಶಾರದಾ ಮಹಿಳಾ ಪದವಿಪೂರ್ವ ಕಾಲೇಜು ಕಳೆದ ನಾಲ್ಕು ದಶಕಗಳಿಂದ ಮೌಲ್ಯಯುತ ಶಿಕ್ಷಣವನ್ನು ನೀಡುತಿದೆ ಎಂದು ಹೇಳಿದರು. ಅತ್ಯುತ್ತಮ ಫಲಿತಾಂಶ ದಾಖಲಿಸಲು ಪ್ರಯತ್ನ ನಡೆಸಿದ ಎಲ್ಲಾ ಉಪನ್ಯಾಸಕರನ್ನು,
ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಸಾರವಾಗಿ ಕಾಲೇಜಿನಲ್ಲಿ ಕೆಲವೊಂದು ಬದಲಾವಣೆ ಮಾಡಲಾಗುವುದು. ಮುಂದೆ ಕಾಲೇಜಿನಲ್ಲಿ ಹುಡುಗರು ಹಾಗು ಹುಡುಗಿಯರು ಒಟ್ಟಾಗಿ ಕಲಿಯುವ ಕೋಎಜ್ಯುಕೇಷನ್(ಸಹ ಶಿಕ್ಷಣ) ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ದ.ಕ.ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ರೇವತಿ ನಂದನ್, ನಿರ್ದೆಶಕರಾದ ಡಾ.ಸಾಯಿ ಗೀತಾ ಜ್ಞಾನೇಶ್, ಕಾಲೇಜಿನ ಪ್ರಾಂಶುಪಾಲರಾದ ದಯಾಮಣಿ.ಕೆ, ಅನುಷ್ಯಾ ಅವರ ತಂದೆ ಅರುಳ್ ರಾಜ್, ತಾಯಿ ಭಾನುಮತಿ, ಕಾಲೇಜಿನ ಉಪನ್ಯಾಸಕರಾದ ಸ್ವರ್ಣ ಕಲಾ, ಪ್ರಸನ್ನ ಹೆಚ್, ದಾಮೋದರ, ಬಾಲಕೃಷ್ಣ, ದಯಾನಂದ, ತಾರಾ ಕಾಂತಿ, ಬಾಲಚಂದ್ರ, ಕೃತಿ ಶೆಟ್ಟಿ, ಸುಮತಿ ಉಪಸ್ಥಿತರಿದ್ದರು.