ಸುಳ್ಯ: ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ
2023-24 ನೇ ಸಾಲಿನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಕೆವಿಜಿ ಐಪಿಎಸ್ ಸಭಾಂಗಣದಲ್ಲಿ ಜರುಗಿತು. ಶಿಬಿರಾರ್ಥಿಗಳು ಬೇಸಿಗೆ ಶಿಬಿರದ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು ಹಾಗೂ
ಶಿಬಿರದಲ್ಲಿ ಕಲಿತ ನೃತ್ಯವನ್ನು ಪ್ರದರ್ಶಿಸಿದರು. ಬೇಸಿಗೆ ಶಿಬಿರದಲ್ಲಿ ಮಕ್ಕಳು ನಟನೆ ಹಾಡು ಅಭಿನಯ ನೃತ್ಯ ,ಆರ್ಟ್ ಕ್ರಾಫ್ಟ್, ಸ್ವಿಮ್ಮಿಂಗ್, ಆಟಗಳು, ಕಸದಿಂದ ರಸ ಬೆಂಕಿ ರಹಿತ ಅಡುಗೆ, ಎಂಬ್ರಾಯಿಡರಿ, ಮಣ್ಣಿನ ಕಲಾಕೃತಿ, ಗೂಡು ದೀಪ ಹೀಗೆ ಹತ್ತು ಹಲವಾರು ವೈವಿಧ್ಯಮಯ ಕಲೆಗಳನ್ನು, ನುರಿತ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಬೆರೆತು ಕಲಿತುಕೊಂಡರು. ಪ್ರಾಂಶುಪಾಲರಾದ ಅರುಣ್ ಕುಮಾರ್ ಮಕ್ಕಳಿಗೆ
ಅಭಿನಂದನಾ ಪತ್ರಗಳನ್ನು ನೀಡಿ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.