ಅರಂತೋಡು: ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರಂತೋಡು ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ಘಟಕ ( ಸ್ವಚ್ಛ ಸಂಕೀರ್ಣ )ಜುಲೈ 9ರಂದು ಆಕಸ್ಮಿಕ ಅಗ್ನಿ ದುರಂತಕ್ಕೆ ತುತ್ತಾಗಿ ಸಂಪೂರ್ಣ ನಾಶಗೊಂಡಿದ್ದು. ಅದರ ಪುನರ್ ನಿರ್ಮಾಣಕ್ಕೆ
ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ರೂ.5ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಉಳಿದ ಅನುದಾನಕ್ಕೆ ಸ್ವಚ್ಛ ಭಾರತ್ ಮಿಷನ್ ಅನುದಾನ ಮುಖಾಂತರ ಬಿಡುಗಡೆಗೆ ಪ್ರಯತ್ನಸುವುದಾಗಿ ಅವರು ತಿಳಿಸಿದ್ದಾರೆ ಎಂದು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ತಿಳಿಸಿದ್ದಾರೆ.














