ಸುಳ್ಯ:ಗಡಿನಾಡು ಕಾಸರಗೋಡಿನ ಕನ್ನಡ ಭವನದವರು ಕೊಡಮಾಡಿದ ನಾಡೋಜ ಡಾ.ಕಯ್ಯಾರ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು, ಅರಂಬೂರು ಘಟಕ ಗೌಡ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಅನುರಾಧಾ ಕುರುಂಜಿಯವರನ್ನು ಅರಂಬೂರಿನಲ್ಲಿ ಸನ್ನಾನಿಸಲಾಯಿತು.ಅರಂಬೂರು ಘಟಕ ಗೌಡ ಸಮಿತಿಯ ವತಿಯಿಂದ
ನಡೆದ ಆಟಿ ಆಚರಣೆಯ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಆರತಿ ಎತ್ತಿ, ಸಾಂಪ್ರದಾಯಿಕವಾಗಿ ಕುಂಕುಮ, ಅರಶಿನ , ಬಳೆ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.ಈ ಸಮಾರಂಭದ ಅಧ್ಯಕ್ಷತೆಯನ್ನು ಪುರುಷ ಘಟಕದ ಅಧ್ಯಕ್ಷ ಮನೋಹರ ಅರಂಬೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ಸತೀಷ್ ಕೊಯಿಂಗಾಜೆ, ಭಾಗಮಂಡಲ ಐಟಿಐ ಪ್ರಾಂಶುಪಾಲ ಶ್ರೀಕಾಂತ್ ಕುಡೆಕಲ್ಲು, ಎಸ್ಕೆಆರ್ಡಿಪಿ ಅರಂಬೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲ್, ಗೌಡ ಯುವ ಸೇವಾ ಸಂಘದ ನಿರ್ದೇಶಕ ಜಗದೀಶ್ ಸರಳಿಕುಂಜ, ಮಹಿಳಾ ಘಟಕದ ಗೌರವ ಸಲಹೆಗಾರರಾದ ಉಷಾ ಚಂದ್ರಶೇಖರ ಪಡ್ಪು , ಹಾರಾವತಿ ಕುಡೆಕಲ್ಲು, ಗೌಡ ಘಟಕದ ಕಾರ್ಯದರ್ಶಿಗಳಾದ ಗಂಗಾಧರ ನೆಡ್ಚಿಲು, ವೇದಾವತಿ ನೆಡ್ಚಿಲು ಮೊದಲಾದವರು ಉಪಸ್ಧಿತರಿದ್ದರು. ಮಹಿಳಾ ಘಟಕದ ಸದಸ್ಯೆ ಸುಮನಾ ನೆಡ್ಚಿಲು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಕವಿತಾ ಕುಡೆಕಲ್ಲು ಸ್ವಾಗತಿಸಿ, ಉಷಾ ಪಾಲಡ್ಕ ಸನ್ಮಾನಿತರನ್ನು ಪರಿಚಯಿಸಿ, ಅಶೋಕ ಪೀಚೆ ವಂದಿಸಿದರು. ಮಹಿಳಾ ಘಟಕದ ಉಪಾಧ್ಯಕ್ಷೆ ರಾಜೀವಿ ಪಾಲಡ್ಕ ನಿರೂಪಿಸಿದರು.











