ಲಖನೌ: ಏಕದಿನ ವಿಶ್ವಕಪ್ನ ಇಂದಿನ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದೆ. ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಹುಮ್ಮಸ್ಸಿನಲ್ಲಿದ್ದರೆ ಭಾರತ ವಿರುದ್ಧ ಸೋಲಿನಿಂದ ಆಸ್ಟ್ರೇಲಿಯಾ ಒತ್ತಡದಲ್ಲಿದೆ.ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಈ ಬಾರಿ
ವಿಶ್ವಕಪ್ ಸೋಲಿನೊಂದಿಗೆ ಆರಂಭಿಸಿದೆ. ಈ ಪಂದ್ಯಕ್ಕೆ ಬ್ಯಾಟಿಂಗ್ ಬಲಪಡಿಸಲು ಆಸ್ಟ್ರೇಲಿಯಾ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಆಡಿಸುವ ಸಾಧ್ಯತೆಯಿದೆ.
ಮಂಡಿನೋವಿನಿಂದ ಚೇತರಿಸಿಕೊಂಡಿರುವ ಮಾರ್ಕ್ ಸ್ಟೊಯಿನಿಸ್ ಇಂದು ಕ್ಯಾಮೆರಾನ್ ಗ್ರೀನ್ ಜಾಗದಲ್ಲಿ ಆಡಬಹುದು. ಐಪಿಎಲ್ನಲ್ಲಿ ಅವರು ಇಲ್ಲಿನ ಲಖನೌ ಸೂಪರ್ಜೈಂಟ್ಸ್ಗೆ ಆಡಿದ್ದಾರೆ.
ಇನ್ನೊಂದೆಡೆ, ದಕ್ಷಿಣ ಆಫ್ರಿಕಾ, ಮೂವರ ಶತಕದೊಡನೆ ಮೊದಲ ಪಂದ್ಯದ ಅಮೋಘ ಗೆಲುವಿನಿಂದ ಉಮೇದಿನಲ್ಲಿದೆ. ಯಾವುದೇ ದಾಳಿಯನ್ನು ಪುಡಿಗಟ್ಟಬಲ್ಲ ಕ್ವಿಂಟನ್ ಡಿಕಾಕ್, ರಸಿ ವಾನ್ ಡರ್ಡಸೆ ಮತ್ತು ಏಡನ್ ಮರ್ಕರಂ ಫಾರ್ಮ್ನಲ್ಲಿ ಇದ್ದಾರೆ. ನಾಯಕ ತೆಂಬಾ ಬವುಮಾ, ಆಕ್ರಮಣಕಾರಿ ಆಟಗಾರ ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್ ಹೀಗೆ ತಂಡದ ಬ್ಯಾಟಿಂಗ್ ಸರದಿ ಆಳವಾಗಿದೆ.
ಪಂದ್ಯ ಆರಂಭ: ಮಧ್ಯಾಹ್ನ 2.00
ಲತಂಡಗಳು:
ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ) ಜೆರಾಲ್ಡ್ ಕೊಯಟ್ಜಿ ಕ್ವಿಂಟನ್ ಡಿ ಕಾಕ್ ರೀಜಾ ಹೆಂಡ್ರಿಕ್ಸ್ ಮಾರ್ಕೊ ಜಾನ್ಸೆನ್ ಹೆನ್ರಿಚ್ ಕ್ಲಾಸೆನ್ ಕೇಶವ ಮಹಾರಾಜ್ ಏಡನ್ ಮರ್ಕರಂ ಡೇವಿಡ್ ಮಿಲ್ಲರ್ ಲುಂಗಿ ಗಿಡಿ ಆ್ಯಂಡಿಲೊ ಪಿಶುವಾಯೊ ಕಗಿಸೊ ರಬಾಡ ತಬ್ರೇಜ್ ಶಂಶಿ ರಸಿ ವಾನ್ಡರ್ ಡಸೆ ಲಿಝಾಡ್ ವಿಲಿಯಮ್ಸ್.
ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ) ಸ್ಟೀವ್ ಸ್ಮಿತ್ ಅಲೆಕ್ಸ್ ಕ್ಯಾರಿ ಜೋಶ್ ಇಂಗ್ಲಿಷ್ ಸೀನ್ ಅಬೋಟ್ ಆ್ಯಷ್ಟನ್ ಅಗರ್ ಕ್ಯಾಮೆರಾನ್ ಗ್ರೀನ್ ಜೋಶ್ ಹೇಜಲ್ವುಡ್ ಟ್ರಾವಿಡ್ ಹೆಡ್್ ಮಿಚೆಲ್ ಮಾರ್ಷ್ ಗ್ಲೆನ್ ಮ್ಯಾಕ್ಸ್ವೆಲ್ ಮಾರ್ಕಸ್ ಸ್ಟೊಯಿನಿಸ್ ಡೇವಿಡ್ ಮಿಲ್ಲರ್ ಆ್ಯಡಂ ಜಂಪಾ ಮತ್ತು ಮಿಚೆಲ್ ಸ್ಟಾರ್ಕ್.