ಸುಳ್ಯ:ವಯನಾಡಿನ ಭೂಕುಸಿತ ಸಂಭವಿಸಿದ ದುರಂತ ಭೂಮಿಯಲ್ಲಿ ಸೇವಾ ನಿರತರಾಗಿದ್ದಾರೆ ಸುಳ್ಯದ ಸೇವಾ ಭಾರತಿಯ ತಂಡ. ಸುಳ್ಯದ ಸೇವಾ ಭಾರತಿಯ 17 ಮಂದಿ ಕಾರ್ಯಕರ್ತರು ದುರಂತ ಸಂಭವಿಸಿದ ಮೇಪ್ಪಾಡಿಯ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ತಂಡವು
ಕಾಳಜಿ ಕೇಂದ್ರದಲ್ಲಿನ ಸ್ವಚ್ಛತೆ, ಆಹಾರ ಸರಬರಾಜು ಮತ್ತಿತರ ಕಾರ್ಯದಲ್ಲಿ ನೆರವಾಗಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುವ ಶ್ಮಶಾನದಲ್ಲಿ ಸ್ವಚ್ಛತೆ ನಡೆಸುವುದು ಸೇರಿದಂತೆ ವಿವಿಧ ಕಾರ್ಯದಲ್ಲಿ ತಂಡವು ತೊಡಗಿಸಿಕೊಂಡಿದೆ. ಬಿಜೆಪಿ ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಗುರುದತ್ ನಾಯಕ್ , ಪ್ರಮುಖರಾದ ನವೀನ್ ಎಲಿಮಲೆ, ಮದುಸೂಧನ್, ಲತೀಶ್ ಗುಂಡ್ಯ, ಪ್ರಶಾಂತ್, ನವೀನ್, ವಿಶ್ವನಾಥ್ ಮತ್ತಿತರರು ತಂಡದಲ್ಲಿದ್ದಾರೆ. ಎರಡು ದಿನಗಳಿಂದ ಸೇವಾ ನಿರತರಾಗಿರುವ ಸೇವಾ ಭಾರತಿ ತಂಡದವರು ಒಂದು ವಾರಗಳ ಕಾಲ ವಯನಾಡಿನಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಲಾಗುವುದು ಎಂದು ಗುರುದತ್ ನಾಯಕ್ ತಿಳಿಸಿದ್ದಾರೆ.