ಸುಳ್ಯ:ಸುಳ್ಯ ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಸುಳ್ಯ ನಗರ ಪಂಚಾಯತ್ನ ಬಿಜೆಪಿ ಸದಸ್ಯರು ನಗರ ಪಂಚಾಯತ್ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಅಮೃತ್ 2.0 ಯೋಜನೆಯಲ್ಲಿ ಸುಮಾರು 58 ಕೋಟಿ ರೂ ವೆಚ್ಚದಲ್ಲಿ ಸುಳ್ಯ ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆಯ
ಪೈಪ್ ಲೈನ್ ಕಾಮಗಾರಿ ನಡೆಯುತಿದೆ. ಇದನ್ನು ಕಾಂಗ್ರೆಸ್ ಸದಸ್ಯರ ಒತ್ತಡದಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಕಾಮಗಾರಿ ಬೇಸಿಗೆಯಲ್ಲಿ ನಡೆಯುವ ಬದಲು ಮಳೆಗಾಲದಲ್ಲಿ ನಡೆಸಿದರೆ ಇನ್ನಷ್ಟು ಸಮಸ್ಯೆ ಆಗಲಿದೆ. ಆದುದರಿಂದ ಈಗ ಕಾಮಗಾರಿ ನಡೆಸಲು ಸೂಕ್ತ ಸಮಯ. ಆದುದರಿಂದ ಕಾಮಗಾರಿ
ಕೂಡಲೇ ಆರಂಭಿಸಬೇಕು ಮತ್ತು ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ನಗರ ಪಂಚಾಯತ್ ಸದಸ್ಯ ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದರು. ಬಿಜೆಪಿ ಸದಸ್ಯರಾದ ವಿನಯಕುಮಾರ್ ಕಂದಡ್ಕ ಬುದ್ಧ ನಾಯ್ಕ್,ಸುಧಾಕರ ಕುರುಂಜಿಭಾಗ್, ಶಶಿಕಲಾ ನೀರಬಿದಿದರೆ, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಪೂಜಿತಾ, ಪ್ರವಿತಾ ಪ್ರಶಾಂತ್, ಸುಶೀಲಾ ಜಿನ್ನಪ್ಪ ಉಪಸ್ಥಿತರಿದ್ದರು. ಪೈಪ್ ಲೈನ್ ಕಾಮಗಾರಿ ಆರಂಭಿಸುವ ತನಕ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಬಿಜೆಪಿ ನ.ಪಂ. ಸದಸ್ಯರು ಹೇಳಿದರು.
ಕಾಂಗ್ರೆಸ್ ಸದಸ್ಯರಿಂದ ಸ್ಪಷ್ಟನೆ:
ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಾದ ಎಂ.ವೆಂಕಪ್ಪ ಹಾಗೂ ನಾಮನಿರ್ದೇಶಿತ ಸದಸ್ಯ ರಾಜು ಪಂಡಿತ್ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಎಂ.ವೆಂಕಪ್ಪ ಗೌಡ ಕಾಮಗಾರಿ ಸ್ಥಗಿತ ಮಾಡಲು ಕಾಂಗ್ರೆಸ್ ಒತ್ತಡ ಹೇರಿಲ್ಲ. ಅರ್ಧಂಬರ್ಧ ಕಾಮಗಾರಿಯಿಂದ ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ನೀರಿನ ಸರಬರಾಜಿನಲ್ಲಿ ಆಗಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ ಅಸ್ಟೇ. ಕಾಮಗಾರಿ ನಿಲ್ಲಿಸಿದರಲ್ಲಿ ನಮ್ಮ ಪಾತ್ರ ಇಲ್ಲಾ ಎಂದರು.
ಕೂಡಲೇ ಕಾಮಗಾರಿ ಆರಂಭಿಸಲು ಸೂಚನೆ:
ನ.ಪಂ.ಮುಖ್ಯಾಧಿಕಾರಿ ಬಿ.ಎಂ.ಡಾಂಗೆ ಮಾತನಾಡಿ
ಸುಳ್ಯ ನಗರದಲ್ಲಿ ನಡೆಯುತ್ತಿರುವ ಪೈಪ್ ಲೈನ್ ಸಂಪೂರ್ಣ ನಿಲ್ಲಿಸಲು ಸೂಚಿಸಲಾಗಿಲ್ಲ. ಚುನಾವಣೆಯ ಹಿನ್ನಲೆಯಲ್ಲಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗದಂತೆ ಮತ್ತು ಕೇಬಲ್ಗಳಿಗೆ ಸಮಸ್ಯೆ ಆಗಬಾರದು ಎಂಬ ನೆಲೆಯಲ್ಲಿ ರಥಬೀದಿಯಿಂದ ಕುರುಂಜಿಭಾಗ್ ತನಕದ ರಸ್ತೆಯ ಬದಿಯಲ್ಲಿ ನಡೆಯುವ ಕಾಮಗಾರಿ ಮಾತ್ರ ಚುನಾವಣೆ ಮುಗಿಯುವ ತನಕ ತಾತ್ಕಾಲಿಕವಾಗಿ ನಿಲ್ಲಿಸುವಂತೆ. ಕಾಮಗಾರಿ ಪೂರ್ತಿಯಾಗಿ ನಿಲ್ಲಿಸಲು ಸೂಚಿಸಿಲ್ಲ. ಆದುದರಿಂದ ಗುತ್ತಿಗೆದಾರರನ್ನು ಸಂಪರ್ಕಿಸಿ ಕೂಡಲೇ ಕಾಮಗಾರಿ ಆರಂಭಿಸಲು ಸೂಚಿಸುವುದಾಗಿ ಅವರು ಹೇಳಿದರು. ಅರ್ಧಂಬರ್ಧ ಕಾಮಗಾರಿಗಳಿಂದ ಜನರಿಗೆ ತೀವ್ರ ಸಮಸ್ಯೆ ಆಗಿರುವ ಬಗ್ಗೆ ಹಕವು ದೂರುಗಳಿವೆ. ಇದನ್ನು ಸರಿಪಡಿಸಿ ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸಲು ಸೂಚಿಸಲಾಗುಗುದು ಎಂದು ಮುಖ್ಯಾಧಿಕಾರಿ ಅವರು ಹೇಳಿದರು. ಬಳಿಕ ಪ್ರತಿಭಟನೆ ಹಿಂಪಡೆದುಕೊಳ್ಳಲಾಯಿತು.