ಸಂಪಾಜೆ: ಕಳೆದ ರಾತ್ರಿ ಸಂಪಾಜೆ ಗ್ರಾಮದ ದೊಡ್ಡಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ರಾತ್ರಿಯೇ ಕಾರ್ಯಾಚರಣೆ ನಡೆಸಿ ಮರವನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅರಣ್ಯ ಇಲಾಖೆಯ
ಉಪ ವಲಯ ಅರಣ್ಯ ಅಧಿಕಾರಿಗಳಾದ.ಚಂದ್ರು, ಶಿವಕುಮಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ.ಹನೀಫ್, ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಧರ್ಮಸ್ಥಳ ವಿಪತ್ತು ತಂಡದ ಚಿದಾನಂದ ಮೂಡನಕಜೆ ತೆರವು ಕಾರ್ಯ ಮಾಡಿದರು ಹಾಗೂ ಹೆದ್ದಾರಿ ಗಸ್ತು ವಾಹನ ಆಗಮಿಸಿ ಸಹಕರಿಸಿತು