ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 60 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ನಾಮಪತ್ರ ಸಲ್ಲಿಸಿದ್ದ 72 ಅಭ್ಯರ್ಥಿಗಳ ಪೈಕಿ 12 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 60 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ 52 ಪುರುಷ ಮತ್ತು
8 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಸುಳ್ಯ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 9 ಮಂದಿಯ ಪೈಕಿ ಸತೀಶ್ ಬಿ. ನಾಮಪತ್ರ ವಾಪಸ್ ಪಡೆದಿದ್ದು,8 ಮಂದಿ ಕಣದಲ್ಲಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 10 ಮಂದಿಯ ಪೈಕಿ ಕೆ. ಸುಬ್ರಹ್ಮಣ್ಯ ಭಟ್ ಮತ್ತು ನವಾಝ್ ಶರೀಫ್ ನಾಮಪತ್ರ ವಾಪಸ್ ಪಡೆದಿದ್ದು, 8 ಮಂದಿ ಕಣದಲ್ಲಿದ್ದಾರೆ.
ಮೂಡುಬಿದಿರೆ ಕ್ಷೇತ್ರದಿಂದ 9 ಮಂದಿಯ ಪೈಕಿ ಮೆಕ್ಸಿಂ ಪಿಂಟೊ ನಾಮಪತ್ರ ವಾಪಸ್ ಪಡೆದಿದ್ದು, 8 ಮಂದಿ ಕಣದಲ್ಲಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 12 ಮಂದಿಯ ಪೈಕಿ ಕಾಟಿಪಳ್ಳ ಮುಹಮ್ಮದ್ ನವಾಝ್ ಮತ್ತು ಸುಪ್ರೀತ್ ಕುಮಾರ್ ಪೂಜಾರಿ ನಾಮಪತ್ರ ವಾಪಸ್ ಪಡೆದಿದ್ದು, 10 ಮಂದಿ ಕಣದಲ್ಲಿದ್ದಾರೆ.
ಮಂಗಳೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 8 ಮಂದಿಯ ಪೈಕಿ ಅಲ್ತಾಫ್ ಕುಂಪಲ, ಬಾಲಕೃಷ್ಣ ಪೂಜಾರಿ ಬೋಳಿಯಾರು, ಮುಹಮ್ಮದ್ ಅಥಾವುಲ್ಲಾ ನಾಮಪತ್ರ ವಾಪಸ್ ಪಡೆದಿದ್ದು, 8 ಮಂದಿ ಕಣದಲ್ಲಿದ್ದಾರೆ.
ಬಂಟ್ವಾಳ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 6 ಮಂದಿಯ ಪೈಕಿ ಅಬ್ದುಲ್ ಮಜೀದ್ ಖಾನ್ ನಾಮಪತ್ರ ವಾಪಸ್ ಪಡೆದಿದ್ದು, 5 ಮಂದಿ ಕಣದಲ್ಲಿದ್ದಾರೆ.
ಪುತ್ತೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 10 ಮಂದಿಯ ಪೈಕಿ ಪಿ. ಇಬ್ರಾಹೀಂ, ಮುಹಮ್ಮದ್ ಅಶ್ರಫ್ ಕಲ್ಲೇಗ ನಾಮಪತ್ರ ವಾಪಸ್ ಪಡೆದಿದ್ದಾರೆ. 8 ಮಂದಿ ಕಣದಲ್ಲಿದ್ದಾರೆ.
ಮಂಗಳೂರು ದಕ್ಷಿಣದಲ್ಲಿ ಯಾರೂ ನಾಮಪತ್ರ ವಾಪಸ್ ಪಡೆದಿಲ್ಲ. 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೇ.10ರಂದು ಚುನಾವಣೆ ನಡೆಯಲಿದ್ದು ಮೇ.13ರಂದು ಮತ ಎಣಿಕೆ ನಡೆಯಲಿದೆ.