ಬನಾರಿ: ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಪರವಾಗಿ “ತಾಳಮದ್ದಳೆ – ಒಂದು ಐತಿಹಾಸಿಕ ಅಧ್ಯಯನ” ಎಂಬ ಕೃತಿಯನ್ನು ಪ್ರಕಟಿಸಬೇಕೆಂದು ನಿರ್ಧರಿಸಲಾಗಿದ್ದು ಈಗಾಗಲೇ ಮಾಹಿತಿಗಳ ಸಂಗ್ರಹ ಭರದಿಂದ ಮುನ್ನಡೆಯುತ್ತಿದೆ. ಈ ಕೃತಿಯಲ್ಲಿ ತಾಳಮದ್ದಳೆಯ ಮೂಲ ಮತ್ತು ಕಾಲದ ಕುರಿತಾದ ಅಧ್ಯಯನದೊಂದಿಗೆ ಅದರ ಬೆಳವಣಿಗೆಯ ವಿವಿಧ ಹಂತಗಳನ್ನು ಗುರುತಿಸಿ ಆಯಾಯ
ಹಂತಗಳಲ್ಲಿ ಮಹತ್ವದ ತಿರುವುಗಳಿಗೆ ಕಾರಣರಾದ ಕಲಾವಿದರ, ಕಲಾಸಕ್ತರ ಮತ್ತು ಸಂಸ್ಥೆಗಳ ಕೊಡುಗೆಗಳನ್ನು ಉಲ್ಲೇಖಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದವರು ಕಲೆ ಸಂಸ್ಕೃತಿ ಮತ್ತು ಸಂಶೋಧನೆಗಳ ಕುರಿತು ಆಸಕ್ತಿಯಿರುವವರು ತಮ್ಮ ಬಳಿ ಇರುವ ಮಾಹಿತಿಗಳನ್ನು ಅಂಚೆ ಮೂಲಕ ಅಥವಾ ದೂರವಾಣಿ ಮೂಲಕ ಅಥವಾ ಇನ್ನಿತರ ಸಂಪರ್ಕ ಸಾಧನಗಳ ಮೂಲಕ ಒದಗಿಸಿಕೊಡಬೇಕಾಗಿ .
ಅದೇ ರೀತಿ ಈ ಬಗೆಯ ಮಾಹಿತಿಗಳು ಲಭ್ಯವಿರುವ ಆಕರಗಳನ್ನು ತಿಳಿಸಲು ವಿನಂತಿಸಲಾಗಿದೆ. ಸಹಕಾರ ನೀಡಿದವರ ಹೆಸರುಗಳನ್ನು ಕೃತಿಯಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗುವುದು ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಕಟಣೆ ತಿಳಿಸಿದೆ.
ಡಾ. ರಮಾನಂದ ಬನಾರಿ ಮಂಜೇಶ್ವರ, ಗಣರಾಜ ಕುಂಬ್ಳೆ ರಾಮಕುಂಜ
ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ
ಅಂಚೆ: ಪಂಜಿಕಲ್ಲು 671543
ಕಾಸರಗೋಡು ಜಿಲ್ಲೆ
ಸಂಪರ್ಕ :
ರಮಾನಂದ ಬನಾರಿ : 9846673422, ವಾಟ್ಸಪ್ : 9446297226
ಗಣರಾಜ ಕುಂಬ್ಳೆ : 7760421005
Email: banariyakshaganakalakendra@gmail.com
ಇವರನ್ನು ಸಂಪರ್ಕಿಸಲು ಕೋರಲಾಗಿದೆ.