ಕಟೀಲು: ಕಟೀಲು ದೇವಾಲಯದ ಮುಂಭಾಗದ ರಸ್ತೆಯಲ್ಲಿ ಖಾಸಗಿ ಕಂಪನಿಗೆ ಸೇರಿದ ಬಸ್ ಏಕಾಏಕಿ ಹೊತ್ತಿ ಉರಿದಿದ್ದು , ಬಸ್ಸಿನಲ್ಲಿದ್ದವರು ಪಾರಾಗಿದ್ದಾರೆ. ಖಾಸಗಿ ಕಂಪೆನಿಯ ಬಸ್ಸು ಮಧ್ಯಾಹ್ನ 2.45ರ ಸುಮಾರಿ ಗೆ ಕಟೀಲು ದೇವಸ್ಥಾನದ ಎದುರು ಹೆದ್ದಾರಿಯಲ್ಲಿ ನಿಲ್ಲಿಸಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಹೊತ್ತಿ ಉರಿದಿದೆ ಎಂದು ಹೇಳಲಾಗಿದ್ದು
ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಲಾಯಿತು.
ಬೆಂಕಿ ತಗಲಿದ ಕೂಡಲೇ ಬಸ್ಸಿನಲ್ಲಿದ್ದವರು ಬಸ್ಸಿನಿಂದ ಜಿಗಿದು ಪವಾಡ ಸದೃಶ ಪಾರಾಗಿದ್ದಾರೆ.