ಡಬ್ಲಿನ್:’ಟೀಂ ಇಂಡಿಯಾ, ಐರ್ಲೆಂಡ್ ಪ್ರವಾಸ ಮಾಡಿದೆ. ಈ ಪ್ರವಾಸದಲ್ಲಿ ಭಾರತ ತಂಡವು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ತಂಡಕ್ಕೆ ಮರಳಿದ ಸ್ಪೀಡ್ ಸ್ಟಾರ್ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ. ಬಹಳ ದಿನಗಳ ನಂತರ ಫಿಟ್ ಆಗಿರುವ ಬುಮ್ರಾ ತಂಡಕ್ಕೆ ಮರಳುತ್ತಿದ್ದಾರೆ. ಏಷ್ಯಾಕಪ್ 2023 ಕ್ಕೂ ಮೊದಲು ಇದು ಬುಮ್ರಾಗೆ ಅತ್ಯಂತ ಪ್ರಮುಖ ಸರಣಿಯಾಗಿದೆ. ಇವರಲ್ಲದೇ ಹಲವು
ಯುವ ಆಟಗಾರರಿಗೆ ಸರಣಿ ಮುಖ್ಯವಾಗಿದೆ.
ಐರಿಶ್ ಟಿ20 ಸರಣಿಗೆ ಟೀಂ ಇಂಡಿಯಾ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಇವರಲ್ಲಿ ಮೂವರು ಆಟಗಾರರು ಚೊಚ್ಚಲ ಅವಕಾಶ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಇವರಲ್ಲಿ ಪ್ರಸಿದ್ಧ ಕೃಷ್ಣ, ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಸೇರಿದ್ದಾರೆ. ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಐಪಿಎಲ್ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಇಬ್ಬರೂ ಆಟಗಾರರು ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದರೆ, ರಿಂಕು ಸಿಂಗ್ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಪ್ರಸಿದ್ಧ್ ಕೃಷ್ಣ ಭಾರತದ ಪರ ಏಕದಿನ ಕ್ರಿಕೆಟ್ ಆಡಿದ್ದು, ಇದೀಗ ಟಿ20 ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಲ್ಲಿದ್ದಾರೆ.
ಈ ಸರಣಿಯು ಸಂಜು ಸ್ಯಾಮ್ಸನ್ಗೆ ಬಹಳ ಮುಖ್ಯವಾಗಿದೆ. ಈ ಆಟಗಾರ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಐರ್ಲೆಂಡ್ ವಿರುದ್ಧವೂ ಮಿಂಚದಿದ್ದರೆ, ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ.
ಐರ್ಲೆಂಡ್ ಸರಣಿ ವೇಳಾಪಟ್ಟಿ
ಮೊದಲ ಟಿ20 – ಆಗಸ್ಟ್ 18, ಮಲಾಹೈಡ್
2 ನೇ ಟಿ20 – 20 ಆಗಸ್ಟ್, ಮಲಾಹೈಡ್
ಮೂರನೇ ಟಿ20 – ಆಗಸ್ಟ್ 23, ಮಲಾಹೈಡ್
ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಪಂದ್ಯಗಳನ್ನು JioCinema ಅಪ್ಲಿಕೇಶನ್ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಕ್ರಿಕೆಟ್ ಅಭಿಮಾನಿಗಳು Sports18 ನಲ್ಲಿ ಲೈವ್ ಆಕ್ಷನ್ ಅನ್ನು ವೀಕ್ಷಿಸಬಹುದಾಗಿದೆ.
ಟೀಂ ಇಂಡಿಯಾ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್ , ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್.
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಗರೆಥ್ ಡೆಲಾನಿ, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಲೋರ್ಕನ್ ಟಕರ್ (ವಿಕೆಟ್ ಕೀಫರ್), ಮಾರ್ಕ್ ಅಡೈರ್, ಜೋಶುವಾ ಲಿಟಲ್, ಬ್ಯಾರಿ ಮೆಕಾರ್ಥಿ, ಥಿಯೋ ವ್ಯಾನ್ಕೋಮ್, ಬೆಂಜಮಿನ್ ವೈಟ್, ಕ್ರೇಗ್ ಯಂಗ್.