ಸುಳ್ಯ:ಸುಳ್ಯದ ಕೆ.ಎಸ್.ಆರ್. ಟಿ .ಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರಮಹಾಲಕ್ಷ್ಮೀ ಹಬ್ಬ ಹಾಗೂ ಬೆಳ್ಳಿಯ ವಾಚ್, ರಕ್ಷಾ ಬಂಧನ ಅನಾವರಣ ಕಾರ್ಯಕ್ರಮ ಆ.21 ರಂದು ನಡೆಯಿತು. ಅತಿಥಿಗಳಾಗಿ
ಸೀಮಾ ಆರ್ಟ್ಸ್ ನ ಮಾಲಕಿ ರೂಪಶ್ರೀ ಜೆ. ರೈ,ಪತ್ರಕರ್ತೆ ಪೂಜಾಶ್ರೀ ವಿತೇಶ್ಕೋಡಿ, ಸೂಂತೋಡು ಎಂಪೋರಿಯಂ ಮಾಲಕಿ ನಳಿನಿ ಸೂರಯ್ಯ ಸೇರಿ ವರಮಹಾಲಕ್ಷ್ಮೀ ದೇವಿಗೆ ದೀಪ ಬೆಳಗಿಸಿ , ಆರತಿ ಬೆಳಗಿದರು. ಸಮಾರಂಭದಲ್ಲಿ ನೂತನ ಬ್ರಾಂಡೆಡ್ ಬೆಳ್ಳಿಯ ವಾಚ್ ಮತ್ತು ಬೆಳ್ಳಿಯ ರಕ್ಷಾ ಬಂಧನ ಅನಾವರಣಗೊಳಿಸಲಾಯಿತು.ಸಂಸ್ಥೆಯ ವತಿಯಿಂದ ಆಗಮಿಸಿದ ಮಹಿಳೆಯರಿಗೆ ಅರಶಿಣ, ಕುಂಕುಮ, ರವಿಕೆ ಕಣ ಸಿಹಿತಿಂಡಿ ನೀಡಲಾಯಿತು.ಈ ಸಂದರ್ಭದಲ್ಲಿ

ಸಂಸ್ಥೆಯ ಪಾಲುದಾರರಾದ ಪ್ರವೀಣ್ ಬಿ. ಗೌಡ, ಸಂಜೀವ ಕೆ, ಲೋಕೇಶ್ ಎಂ.ಎಸ್, ಭವಿತ್ ಯು, ಅಶ್ವಿನಿ ಪ್ರವೀಣ್, ಷಡಾಕ್ಷರಿ, ವಾಮಿಕ, ಹಿತಾ,ಸಿಬ್ಬಂದಿ ಶೋಧನ್, ಗ್ರಾಹಕರಾದ ಶೋಭಾ , ಹರಿಣಿ , ಶ್ರೀಮತಿ ಭವಿತ, ಕು. ಹರ್ಷಿತಾ , ಕು. ವಾಂಚಿತ, ಪವಿತ್ರ, ಪ್ರೇಮಲತಾ, ಅಭಿಜ್ಞಾ, ಸುನಿತಾ , ಹಿತೈಷಿಗಳು ಉಪಸ್ಥಿತರಿದ್ದರು.







