ಸುಳ್ಯ: ಸುಳ್ಯ ನಗರ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಅಮರ ಸುಳ್ಯ ರಮಣೀಯ ಸುಳ್ಯ ಸ್ವಚ್ಛತಾ ತಂಡದ ನೇತೃತ್ವದಲ್ಲಿ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಗಾಂಧಿಜಯಂತಿ ಪ್ರಯುಕ್ತ ಅ. 2 ರಂದು ಸುಳ್ಯದಲ್ಲಿ ಬೃಹತ್ ಸ್ವಚ್ಚತಾ ಆಂದೋಲನ ನಡೆಯಿತು. ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಗರದ ಎಲ್ಲಾ
ಕಚೇರಿಗಳಲ್ಲಿ, ವಿದ್ಯಾ ಸಂಸ್ಥೆಗಳ ಆವರಣ, ಸಾರ್ವಜನಿಕ ಸ್ಥಳಗಳಲ್ಲಿ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರ, ವ್ಯಪಾರ ವ್ಯವಹಾರ ಕ್ಷೇತ್ರ, ಸಂಘ ಸಂಸ್ಥೆಗಳ ಸುತ್ತಲೂ, ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸಾರ್ವಜನಿರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು. ತಹಶೀಲ್ದಾರ್ ಎಂ.ಮಂಜುನಾಥ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ನಗರ ಪಂಚಾಯತ್
ಮುಖ್ಯಾಧಿಕಾರಿ ಸುಧಾಕರ ಹೆಚ್.ಎಂ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸುಳ್ಯ ಎಸ್ಐ ಈರಯ್ಯ ದೂಂತೂರು,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಸ್ನೇಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ,ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ವಿನೋದ್ ಲಸ್ರಾದೊ ಸೇರಿ ನಗರ ಪಂಚಾಯತ್ ಸದಸ್ಯರು,
ಅಮರ ಸುಳ್ಯ ರಮಣೀಯ ಸುಳ್ಯ ತಂಡದ ಸದಸ್ಯರು, ರೋಟರಿ ಕ್ಲಬ್, ರೋಟರಿ ಕ್ಲಬ್ ಸುಳ್ಯ ಸಿಟಿ, ಲಯನ್ಸ್ ಕ್ಲಬ್ ಸೇರಿ ಸಂಘ ಸಂಸ್ಥೆಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಮರ ಸಂಘಟನಾ ಸಮಿತಿ ವತಿಯಿಂದ ನಿರಂತರ ಸ್ವಚ್ಛತೆಗಾಗಿ ಶ್ರಮಿಸುವ ನ.ಪಂ.ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸಿ.ಎಚ್.ಪ್ರಭಾಕರನ್ ನಾಯರ್ ಅವರನ್ನು ಸನ್ಮಾನಿಸಲಾಯಿತು.