ಸುಳ್ಯ:ನಾಡಿನ ಹೆಸರಾಂತ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ಇಂದು 84ನೇ ಹುಟ್ಟು ಹಬ್ಬದ ಸಂಭ್ರಮ. ಅವರ ಅಭಿಮಾನಿಗಳು, ಹಿತೈಷಿಗಳು, ಒಡನಾಡಿಗಳು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಪ್ರಮುಖರು ಸೇರಿ ಹಲವಾರು ಮಂದಿ ಫೇಸ್ ಬುಕ್, ವಾಟ್ಸಾಪ್ ಮೂಲಕ ಹಲವು ಮಂದಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಶಿಕ್ಷಕರಾಗಿ ನಿವೃತ್ತರಾದ
ಸುಬ್ರಾಯ ಚೊಕ್ಕಾಡಿ ಅವರು ಕನ್ನಡ ನಾಡಿನ ಖ್ಯಾತ ಕವಿ, ಕಥೆಗಾರ,ವಿಮರ್ಶಕ ಮತ್ತು ವಿದ್ವಾಂಸರು. ಸುಬ್ರಾಯ ಚೊಕ್ಕಾಡಿಯವರು 1940ರ ಜೂನ್ 29ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ಇಂದು ಅವರಿಗೆ 84 ನೇ ಹುಟ್ಟು ಹಬ್ಬದ ಸಂಭ್ರಮ.