ಸುಳ್ಯ: ಸುಳ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ಉದ್ಘಾಟನೆ ಜೂ.29 ರಂದು ನಡೆಯಿತು. ರಥಬೀದಿಯ ವಿನಾಯಕ ಬಿಲ್ಡಿಂಗ್ನ ಮೊದಲ ಮಹಡಿಯಲ್ಲಿ ಕಾರ್ಯಾರಂಭ ಮಾಡಿರುವ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯನ್ನು ಸುಳ್ಯ ವೃತ್ತ ನಿರೀಕ್ಷಕರಾದ ನವೀನ್ಚಂದ್ರ ಜೋಗಿ ಉದ್ಘಾಟಿಸಿದರು. ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ಮುಖ್ಯ ಅತಿಥಿಯಾಗಿದ್ದರು.
ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ
ಜನಾರ್ಧನ. ಡಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಸತ್ಯನಾರಾಣ ಅಚ್ರಪ್ಪಾಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಅಶ್ವತ್ ಬಿಳಿಮಲೆ,
ನಿರ್ದೇಶಕರಾದ ರಾಘವ ಗೌಡ ಎಂ.ಕೆ, ಪ್ರಕಾಶ್ ಕೆ, ಭವಾನಿ ಬಿ.ಆರ್, ಹರ್ಷಿತಾ ಎನ್.ಪಿ, ಸಚಿನ್ ಕುಮಾರ್ ಬಿ.ಎನ್, ಸತೀಶ್ ಕೆ.ಜಿ, ಮಹೇಶ್ ಎಂ.ಆರ್, ದೀಕ್ಷಿತ್ ಕುಮಾರ್ ಪಿ, ವೃತ್ತಿಪರ ನಿರ್ದೇಶಕರಾದ ಆನಂದ ಖಂಡಿಗ, ಡಾ. ಪುರುಷೋತ್ತಮ ಕೆ.ಜಿ, ಧರ್ಮಪಾಲ ಕೊಯಿಂಗಾಜೆ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಜನಾರ್ಧನ ಡಿ ಸ್ವಾಗತಿಸಿ, ವೃತ್ತಿಪರ ನಿರ್ದೇಶಕರಾದ ಪುರುಷೋತ್ತಮ ಕೆ.ಜಿ ವಂದಿಸಿ, ಆನಂದ ಖಂಡಿಗ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಸಿಬ್ಬಂದಿ ಲಿಖಿತಾ ಅತಿಥಿಗಳನ್ನು ಆಹ್ವಾನಿಸಿದರು.
ಠೇವಣಾತಿ ಮೇಲೆ ಆಕರ್ಷಕ ಬಡ್ಡಿ ದರ- ಸುಲಭ ಸಾಲ ಸೌಲಭ್ಯ:
ಸುಳ್ಯದಲ್ಲಿ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸ್ವರ್ಣಶ್ರೀ ಫೈನಾನ್ಸ್ ಬೆಳೆದು ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಆಗಿ ರೂಪುಗೊಂಡಿದೆ.
ಸಂಸ್ಥೆಯ ಉದ್ಘಾಟನೆಯ ಪ್ರಯುಕ್ತ ಠೇವಣಾತಿಗಳ ಮೇಲೆ ಆಕರ್ಷಕ ಬಡ್ಡಿ ದರ ನೀಡಲಾಗುವುದು.
ನಿರಖು ಠೇವಣಿ 30 ರಿಂದ 90 ದಿನಗಳ ವರೆಗೆ .6%, 91ರಿಂದ 180 ದಿನಗಳವರೆಗೆ 6.50%, 181 ರಿಂದ 364 ದಿನಗಳವರೆಗೆ 8%, ಒಂದು ವರ್ಷ ಮೇಲ್ಪಟ್ಟು 10 % ಬಡ್ಡಿ ನೀಡಲಾಗುವುದು.
ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ.
ಸ್ವರ್ಣ ನಿಧಿ ಠೇವಣಿ 99 ತಿಂಗಳಿಗೆ ದ್ವಿಗುಣಗೊಳ್ಳುವುದು. ಉಳಿತಾಯ ಖಾತೆಗೆ ಶೇ.4%, ಆವರ್ತನ ನಿಧಿ ಒಂದು ವರ್ಷ ಮೇಲ್ಪಟ್ಟು 9.50%, ಸ್ವರ್ಣ ದಿನ ಠೇವಣಿ(ಪಿಗ್ಮಿ-ಒಂದು ವರ್ಷ ಮೇಲ್ಪಟ್ಟು) 4%. ಬಡ್ಡಿ ನೀಡಲಾಗುತ್ತದೆ.
ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ತ್ವರಿತವಾಗಿ ನೀಡಲಾಗುವುದು.
ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭೂ ಅಡಮಾನ ಸಾಲ, ವೇತನ ಆಧಾರಿತ ಸಾಲ, ಭೂಮಿ ಖರೀದಿ ಸಾಲ, ಜಾಮೀನು ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಮನೆ ನಿವೇಶನ ಖರೀದಿ ಸಾಲ, ಮನೆ ನಿರ್ಮಾಣ ಸಾಲ ನೀಡಲಾಗುತ್ತದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ತಿಳಿಸಿದ್ದಾರೆ.