ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್ಎಸ್ಪಿಯು ಕಾಲೇಜು ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕಾಲೇಜಿನಲ್ಲಿ ಓಣಂ ಆಚರಿಸಲಾಯಿತಿ. ಎಸ್ಎಸ್ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಓಣಂ ಆಚರಣೆಯ ನಿಮಿತ್ತ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕದ
ವಿದ್ಯಾರ್ಥಿಗಳು ಬೃಹತ್ ಪೂಕಳಂ ರಚಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್ ಸಂಸ್ಕೃತ ಉಪನ್ಯಾಸಕ ಡಾ.ಪ್ರಜ್ವಲ್.ಜೆ, ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ಎನ್ಎಸ್ಎಸ್ ಯೋಜನಾಧಿಕಾರಿ ಭವ್ಯಶ್ರೀ ಹರೀಶ್ ಕುಲ್ಕುಂದ, ರೆಡ್ಕ್ರಾಸ್ ಸಂಯೋಜಕಿ ಶ್ರುತಿ ಯಾಲದಾಳು, ರೋವರ್ಸ್ ಮತ್ತು ರೇಂಜರ್ಸ್ ನಾಯಕ ಪ್ರವೀಣ್ ಎರ್ಮಾಯಿಲ್, ಸ್ಟಾಪ್ ಸೆಕ್ರೇಟರಿ ಗಿರೀಶ್, ಉಪನ್ಯಾಸಕರಾದ ಜಯಶ್ರೀ.ವಿ.ದಂಬೆಕೋಡಿ, ಮನೋಜ್ ಕುಮಾರ್ ಬಿ.ಎಸ್, ರತ್ನಾಕರ ಎಸ್, ಶ್ರೀಧರ್ ಪುತ್ರನ್, ಸುಧಾ, ಸೌಮ್ಯಾ, ಶ್ಯಾಮಿಲಿ, ಪೂರ್ಣಿಮಾ ಸೇರಿದಂತೆ ಎನ್ಎಸ್ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು, ಸಿಬಂದಿಗಳು ಉಪಸ್ಥಿತರಿದ್ದರು.