ಹೈದರಾಬಾದ್: ಐಪಿಎಲ್ ಪಂದ್ಯದಲ್ಲಿ ದಾಖಲೆಯ ಮೊತ್ತ ಬೆನ್ನಟ್ಟಿ ಕೊನೆಯ ತನಕ ಹೋರಾಟ ನಡೆಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ವೀರೋಚಿತ ಸೋಲು. ಸನ್ರೈಸರ್ಸ್ ಹೈದರಬಾದ್ ನೀಡಿದ 278 ರನ್ ಗುರಿ ಬೆನ್ನಟ್ಟಿದ ಮುಂಬೈ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತು. ಇದರಿಂದ ಎಸ್ಆರ್ಎಚ್ 31 ರನ್ ಜಯ ಗಳಿಸಿತು. ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ
ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಬ್ಯಾಟರ್ಗಳು ಸಿಕ್ಸರ್ ಬೌಂಡರಿಗಳ ಸುರಿಮಳೆಯನ್ನೇ ಸುರಿಸಿ ಅಕ್ಷರಷಃ ಕ್ರಿಕೆಟ್ನ ರಸದೌತಣವನ್ನೇ ಉಣ ಬಡಿಸಿತು. ಎರಡೂ ತಂಡದ ಬ್ಯಾಟರ್ಗಳು 40 ಓವರ್ಗಳಲ್ಲಿ 523 ರನ್ ಹರಿಯಿತು. ಬೃಹತ್ ಮೊತ್ತ ಬೆನ್ನಟ್ಟಿದ ಮುಂಬೈಗೆ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಸ್ಪೋಟಕ ಆರಂಭ ನೀಡಿದರು. 3 ಓವರ್ಗಳಲ್ಲಿ 50 ರನ್ ಪೇರಿಸಿದರು. ರೋಹಿತ್ ಶರ್ಮ 12 ಎಸೆತಗಳಲ್ಲಿ 3 ಸಿಕ್ಸರ್ ಮತ್ತು ಒಂದು ಬೌಂಡರಿ ಸಹೀತ 26, ಇಶಾನ್ ಕಿಸನ್ 13 ಎಸೆತಗಳಲ್ಲಿ 4ಸಿಕ್ಸರ್ ಮತ್ತು 2 ಬೌಂಡರಿ ಸಹೀತ 34 ರನ್ ಬಾರಿಸಿದರು. ನಮನ್ ದೀರ್
14 ಎಸೆತಗಳಲ್ಲಿ 2ಸಿಕ್ಸರ್ ಮತ್ತು 2 ಬೌಂಡರಿ ಸಹೀತ 30 ರನ್, ತಿಲಕ್ ವರ್ಮ 34 ಎಸೆತಗಳಲ್ಲಿ
6 ಸಿಕ್ಸರ್ ಮತ್ತು 2 ಬೌಂಡರಿ ಸಹೀತ 64 ರನ್, ನಾಯಕ ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ ತಲಾ 1 ಸಿಕ್ಸರ್ ಮತ್ತು ಬೌಂಡರಿ ಸಹೀತ 24 ರನ್, ಟಿಮ್ ಡೇವಿಡ್ 22 ಎಸೆತಗಳಲ್ಲಿ 3 ಸಿಕ್ಸರ್ 2 ಬೌಂಡರಿ ನೆರವಿನಿಂದ ಅಜೇಯ 42 ರನ್ ಬಾರಿಸಿದರು.
ಟಾಸ್ ಸೋತು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ಗಳ ಐಪಿಎಲ್ ದಾಖಲೆಯ ಮೊತ್ತ ಪೇರಿಸಿತು. ಆರಂಭದಿಂದಲೂ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಎಸ್ಆರ್ಎಚ್ ಬ್ಯಾಟರ್ಗಳು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಟ್ರಾವಿಸ್ ಹೆಡ್ ಕೇವಲ 24 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿದರೆ, ಸ್ಪೋಟಕ ಇನ್ನೀಂಗ್ಸ್ ಕಟ್ಟಿದ ಅಭಿಷೇಕ್ ಶರ್ಮ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 63 ರನ್ ಬಾರಿಸಿದರು. ಹೆನ್ರಿ ಚ್ ಕ್ಲಾಸೆನ್ ಕೇವಲ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 80 ರನ್,ಆಡಮ್ ಮರ್ಕರಮ್ 28 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 42 ರನ್ ಬಾರಿಸಿದರು. 523 ರನ್ ಹರಿದ ಪಂದ್ಯದಲ್ಲಿ 38 ಸಿಕ್ಸರ್ ಸಿಡಿದವು. ನಾಲ್ಕು ಮಂದಿ ಬ್ಯಾಟರ್ಗಳು ಅರ್ಧ ಶತಕ ಸಿಡಿಸಿದರು. 25 ಎಸೆತಗಳಿಗಿಂತ ಕಡಿಮೆ ಎದುರಿಸಿ ಈ ನಾಲ್ವರು ಅರ್ಧ ಶತಕ ಬಾರಿಸಿದರು.