ಸುಳ್ಯ: ಹಿರಿಯ ಆರ್ಎಸ್ಎಸ್ ಮುಖಂಡರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಲೋಕಸಭಾ ಚುನಾವಣಾಎ ದಿನ ಸುಳ್ಯ ವಿಧಾನಸಭೆಯ ವಿವಿಧ ಬಿಜೆಪಿ ಬೂತ್ಗಳಿಗೆ ಭೇಟಿ ನೀಡಿದರು. ಪಂಬೆತ್ತಾಡಿ ಬಿಜೆಪಿ ಬೂತ್ಗೆ ಭೇಟಿ
ನೀಡಿದ ಅವರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು. ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ಜಾಕೆ, ಪಿಜಿಎಸ್ಎನ್ ಪ್ರಸಾದ್, ದಿಲೀಪ್ ಬಾಬ್ಲುಬೆಟ್ಟು, ಅನೂಪ್ ಬಿಳಿಮಲೆ, ಅಜಿತ್ ರಾವ್ ಕಿಲಂಗೋಡಿ ಮತ್ತಿತರ ಪ್ರಮುಖರು ಇದ್ದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಅವರು ವಿವಿಧ ಬೂತ್ಗಳಿಗೆ ಭೇಟಿ ನೀಡಿದರು.