ಸುಳ್ಯ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಿಧ ಕಡೆಯ ಕಾಂಗ್ರೆಸ್ ಬೂತ್ಗಳಿಗೆ ಭೇಟಿ ನೀಡಿದರು. ಮಂಡೆಕೋಲು, ಅಜ್ಜಾವರ ಸೇರಿದಂತೆ ವಿವಿಧ ಬೂತ್ಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು. ಕರುಣಾಕರ ಅಡ್ಪಂಗಾಯ, ಹಸೈನಾರ್ ಹಾಜಿ ಗೋರಡ್ಕ, ಇಬ್ರಾಹಿಂ ಕತ್ತರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು