ಕಲ್ಲುಗುಂಡಿ: ಸುಶಿಕ್ಷಿತ ಮಹಿಳೆ ಪ್ರತಿ ಕುಟುಂಬದ ದೊಡ್ಡ ಆಸ್ತಿ. ಆಧುನಿಕ ಯುಗದಲ್ಲಿ ಧಾರ್ಮಿಕ ವಿದ್ಯಾಭ್ಯಾಸದ ಜೊತೆಗೆ ಲೌಕಿಕ ವಿದ್ಯಾಭ್ಯಾಸ ಕಲಿಸುವ ಕೇಂದ್ರಗಳು ಹೆಚ್ಚು ಮೂಡಿ ಬರಬೇಕು. ಮಹಿಳಾ ಶರೀಯತ್ ಕಾಲೇಜು ಶಿಕ್ಷಣ ವ್ಯವಸ್ಥೆಯ ಮತ್ತು ಸಮಾಜದ ಅಭಿವೃದಿಯ ಸಂಕೇತ ಎಂದು ಮಾಡನ್ನೂರು ನೂರುಲ್ ಹುದಾ ಅಕಾಡೆಮಿಯ ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ ಹೇಳಿದರು.
ಮುಹಿಯುದ್ದೀನ್ ಜುಮಾ ಮಸೀದಿ ಕಲ್ಲುಗುಂಡಿ ಇದರ ಅಧೀನದಲ್ಲಿ
ಕಾರ್ಯಾಚರಿಸುತ್ತಿರುವ ಹೆಣ್ಣು ಮಕ್ಕಳಿಗೆ ಪಿಯುಸಿ ಮತ್ತು ಧಾರ್ಮಿಕ ಶರೀಅತ್ ಕೋರ್ಸ್ ಜಂಟಿಯಾಗಿ ಕಲಿಸುವ ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮ್ಮೇಳನ ಹಾಗೂ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.
ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕುನ್ನುಂಗೈ ದುವಾಃ ನೇತೃತ್ವ ವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಶರೀಯತ್ ಕಾಲೇಜಿನ ಅಧ್ಯಕ್ಷರಾದ ಎಸ್. ಆಲಿ ಹಾಜಿ ವಹಿಸಿದ್ದರು. ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಅಹ್ಮದ್ ನಈಂ ಫೈಝಿ ಪ್ರಾಸ್ತವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಕಲ್ಲುಗುಂಡಿ ಎಂ.ಜೆ.ಎಂ ಅಧ್ಯಕ್ಷರಾದ ಹೆಚ್.ಎ.ಅಬ್ಬಾಸ್ ಸೆಂಟ್ಯಾರ್, ಮಾಜಿ ಅಧ್ಯಕ್ಷರಾದ ಬದ್ರಿಯಾ ಮೊಯಿದು ಹಾಜಿ, ತಾಜ್ ಮಹಮ್ಮದ್ ಸಂಪಾಜೆ, ಅಶ್ರಫ್ ಕೆ. ಎಂ, ಇಬ್ರಾಹಿಂ ಎ. ಕೆ.. ಸಂಟ್ಯಾರ್ ಪ್ರತಿಷ್ಠಾನದ ಅಶ್ರಫ್ ಎಚ್. ಎ, ವಾರ್ಷಿಕೋತ್ಸವ
ಸ್ವಾಗತ ಸಮಿತಿಯ ಅಧ್ಯಕ್ಷರಾದ ಕಿಪಾಯತ್ತುಲ್ಲ, ಸದರ್ ಇಬ್ರಾಹಿಂ ಫೈಝಿ, ಇಬ್ರಾಹಿಂ ವಾಹಬಿ, ಝಕರಿಯ ಮುಸ್ಲಿಯಾರ್ ಮುಕ್ವೆ, ಅಬ್ದುಲ್ ಖಾದರ್ ಫೈಝಿ ಐವರ್ನಾಡ್, ಶಾಕಿರ್ ಹುದವಿ ಮಾಡನ್ನೂರ್ ಹಾಜಿ ಇಬ್ರಾಹಿಂ ಕರಾವಳಿ, ಸಾಜೀದ್ ಅಝಹರಿ, ಅಕ್ಬರ್ ಕರಾವಳಿ,ಎಂ.ಜೆ.ಎಂ ಕಾರ್ಯದರ್ಶಿ ರಝಾಕ್ ಕೆ.ಎ, ಹಮೀದ್ ಹಾಜಿ ಸುಳ್ಯ, ರಝಕ್ ಹಾಜಿ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಎ.ಕೆ.ಹಸೈನಾರ್ ಸ್ವಾಗತಿಸಿದರು.
ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಎರಡು ದಿನಗಳ ಸಮ್ಮೇಳನ ಹಾಗೂ ಧಾರ್ಮಿಕ ಪ್ರಭಾಷಣ ಹಮ್ಮಿಕೊಳ್ಳಲಾಗಿತ್ತು.