ಸುಳ್ಯ:ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಚಿತ ಕ್ರೀಡಾ ತರಬೇತಿ ಶಿಬಿರ ಸಮಾರೋಪಗೊಂಡಿತು. 13 ರಿಂದ 17 ವರ್ಷದ ವಿದ್ಯಾರ್ಥಿನಿಯರಿಗೆ ಶಿಬಿರ ಏರ್ಪಡಿಸಲಾಯಿತು. ಏಪ್ರಿಲ್ 25 ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ದಯಾಮಣಿ.ಕೆ ವಹಿಸಿದ್ದರು. ವೇದಿಕೆಯಲ್ಲಿ ಚೊಕ್ಕಾಡಿ
ಪ್ರೌಢಶಾಲೆ, ಕುಕ್ಕು ಜಡ್ಕ ಇಲ್ಲಿನ ಮುಖ್ಯ ತರಬೇತುದಾರರಾದ ಚಂದ್ರಶೇಖರ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ತರಬೇತುದಾರರಾದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ರಂಗನಾಥ್ ದೈಹಿಕ ಶಿಕ್ಷಣ ಶಿಕ್ಷಕರಾದ ನಾಗರಾಜ್, ಬಾಲಚಂದ್ರ ಪ್ರಭಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕರಾದಪ್ರಸನ್ನ ಸ್ವಾಗತಿಸಿ, ಸಮಾಜಶಾಸ್ತ್ರ ಉಪನ್ಯಾಸಕರಾದ ಬಾಲಕೃಷ್ಣ ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ದಾಮೋದರ. ಎನ್ ಕಾರ್ಯಕ್ರಮ ನಿರೋಪಿಸಿದರು