ಸುಳ್ಯ:ವ್ಯಕ್ತಿಯ ವ್ಯಕ್ತಿತ್ವ ಆತನ ಮನಸ್ಸಿನಂತೆ, ಆತನ ಆಲೋಚನೆಯಂತೆ ರೂಪುಗೊಳ್ಳುತ್ತದೆ, ತನ್ನ ಸಹಜ ಭಾವನೆಗಳನ್ನು ತನಗನಿಸಿದಂತೆ ಅಭಿವ್ಯಕ್ತಿಸಿ ಸಾಹಿತ್ಯ ರಚಿಸುತ್ತಿದ್ದೆ ಎಂದು ಕುಯಿಂತೋಡು ದಾಮೋದರ ಅವರು ಹೇಳಿದರು. ಅವರು ಸುಳ್ಯದ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆದ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಸಹಯೋಗದಲ್ಲಿ ನಡೆದ
ತಿಂಗಳ ಸಾಹಿತ್ಯ ಸಂವಾದ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಂವಾದ ಕಾರ್ಯಕ್ರಮಸಲ್ಲಿ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕುಯಿಂತೋಡು ದಾಮೋದರ ಇವರ ಸಾಹಿತ್ಯ ಹಾಗೂ ವ್ಯಕ್ತಿತ್ವ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅರಂತೋಡು ವಿಶ್ರಾಂತ ಪ್ರಾಚಾರ್ಯ ಕೆ. ಆರ್ ಗಂಗಾಧರ, ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಮಾತನಾಡಿದರು.
ಸಾಹಿತಿ ಸಂಗೀತಾ ರವಿರಾಜ್ ಕುಯಿಂತೋಡು ದಾಮೋದರ ಅವರ ಕೃತಿಗಳ ಪರಿಚಯ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಲೀಲಾ ದಾಮೋದರ ವಹಿಸಿದ್ದರು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಕಾರ್ಯದರ್ಶಿ, ಕೆ.ಆರ್. ಗೋಪಾಲಕೃಷ್ಣ ಅವರು ಕುಯಿಂತೋಡು ಅವರ ಗೀತೆಗಳನ್ನು ಹಾಡಿದರು. ಖುಷಿತ್ ಕುಯಿಂತೋಡು ಅವರ ಶಿಶುಗೀತೆಯನ್ನು ಹಾಡಿದರು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಉಪಾಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಿ, ರಾಮಚಂದ್ರ ಪಲ್ಲತ್ತಡ್ಕ ವಂದಿಸಿದರು. ಉದಯ ಭಾಸ್ಕರ ಸುಳ್ಯ ಇವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಪೋಷಕಾಧ್ಯಕ್ಷ ಡಾ. ರಂಗಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.