ಸುಳ್ಯ: ಸಂಪಾಜೆ ಗ್ರಾಮದ ಮೂಲಭೂತ ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಗ್ರಾಮದ ಮೂಲಭೂತ ಸೌಕರ್ಯಗಳಾದ ಸಾರ್ವಜನಿಕ ಸ್ಮಶಾನ, ಪ್ಲಾಟಿಂಗ್, ನೈನ್ ಇಲವೆನ್,ಅಡಿಕೆ ಎಲೆ ಹಳದಿ ರೋಗ ಮೊದಲಾದ ವಿಷಯಗಳ ಬಗ್ಗೆ
ಚರ್ಚೆ ನಡೆಸಲಾಯಿತು ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷರಾದ ಕೆ.ಪಿ.ಜಾನಿ. ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ ಮುಖಂಡರಾದ ಎಂ. ವೆಂಕಪ್ಪ ಗೌಡ ಮಹಮ್ಮದ್ ಕುಂಞಿ ಗೂನಡ್ಕ. ಎ .ಕೆ ಇಬ್ರಾಹಿಂ ಕಲ್ಲುಗುಂಡಿ ಜೊತೆಗಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ವಲಯ ಅರಣ್ಯಾಧಿಕಾರಿ ಸರ್ವೆ ಇಲಾಖೆಯ ಸಹಾಯಕ ನಿರ್ದೇಶಕರು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.