ಸುಳ್ಯ: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ
ವಿದ್ಯಾರ್ಥಿಗಳಿಗೆ ಟಿ ಶರ್ಟ್ ವಿತರಿಸಲಾಯಿತು. ಪ್ರತಿಷ್ಠಾನದ ವತಿಯಿಂದ ಕೊಡೆ, ಶೂ, ಪಠ್ಯ ಪುಸ್ತಕಗಳು ಹೀಗೆ ವಿವಿಧ ಕಲಿಕಾ ಉಪಕರಣಗಳನ್ನು ವಿತರಿಸಲಾಗುತ್ತಿದ್ದು ಈ ಬಾರಿ ಉಚಿತವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಟಿ ಶರ್ಟ್ ವಿತರಿಸಲಾಯಿತು. ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಎಸ್ ಪಿ ಲೋಕನಾಥ್,ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ, ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಕಲ್ಲುಗದ್ದೆ, ಕಲ್ಲುಗುಂಡಿ ಸಂಪಾಜೆ ವರ್ತಕರ ಸಂಘದ ಅಧ್ಯಕ್ಷರು ಹಾಗೂ ಶ್ರೀ ಶಾರದಾ ವಿಧ್ಯಾ ಸಂಘದ ನಿರ್ದೇಶಕರಾದ ಯು ಬಿ ಚಕ್ರಪಾಣಿ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ,

ಸಂಪಾಜೆ ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರು ಬಿ ಜಿ, ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ತಾರ ಚಿದಾನಂದ, ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಇ ಗೂನಡ್ಕ, ಕರಾವಳಿ ರಬ್ಬರ್ ಮತ್ತು ಎಂಟರ್ಪ್ರೈಸಸ್ ಕಲ್ಲುಗುಂಡಿ ಇದರ ಮಾಲಕರಾದ ಹಾಜಿ ಇಬ್ರಾಹಿಂ ಮೈಲಿಕಲ್ಲು, ಅಲ್- ಅಮೀನ್ ವೆಲ್ ಫೇರ್ ಅಸೋಸಿಯೇಶನ್ ಗೂನಡ್ಕ ಇದರ ಅಧ್ಯಕ್ಷ ಜಾಫರ್ ಸಾಧಿಕ್, ಎಸ್ ಡಿ ಎಂಸಿ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್, ಮುಖ್ಯೋಪಾಧ್ಯಾಯರಾದ ಹನುಮಂತಪ್ಪ ಜಿ, ನಿವೃತ್ತ ಮುಖ್ಯೋಪಾಧ್ಯಾರಾದ ದಾಮೋದರ್ ಮಾಸ್ತರ್ ಮತ್ತು ಯು ಎಸ್ ಚಿದಾನಂದ ಹಾಗೂ ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ಅಯ್ಯೂಬ್ ಗೂನಡ್ಕ, ಮಂಜುನಾಥ ಆರ್ ಹಿರಿಯೂರು ಮುಂತಾದವರು ಉಪಸ್ಥಿತರಿದ್ದರು.