ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯಮತ್ತು ಭಾವನಾ ಬಳಗ ಸುಳ್ಯ ಇದರ ಸಹಭಾಗಿತ್ವದಲ್ಲಿ ಜ್ಞಾನ ದೀಪ ವಿದ್ಯಾಸಂಸ್ಥೆ ಎಲಿಮಲೆ ಇಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಹಿತ್ಯ ಸಂಭ್ರಮ 2022 ರ ಉದ್ಘಾಟನಾ ಸಮಾರಂಭ ಹಾಗೂ ಭಾವನಾ ಸುಗಮ ಸಂಗೀತ ಬಳಗ ಸುಳ್ಯ ಇವರ ಸಹಯೋಗದಲ್ಲಿ ಗಾನ ಯಾನ – ಗೀತೆ ಗಾಯನ
ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಞಾನದೀಪ ವಿಶ್ವಸ್ಥ ಮಂಡಳಿ ಇದರ ಅಧ್ಯಕ್ಷರಾದ ಚಂದ್ರಶೇಖರ ಭಟ್ ತಳೂರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಜ್ಞಾನದೀಪ ವಿದ್ಯಾಸಂಸ್ಥೆಯ ಮುಖ್ಯ ಗುರುಗಳಾದ ಗದಾಧರ ಬಾಳುಗೋಡು, ಜ್ಞಾನದೀಪ ವಿದ್ಯಾಸಂಸ್ಥೆಯ ನಿರ್ದೇಶಕ ಕೃಷ್ಣಯ್ಯ ಮೂಲೆತೋಟ, ಭಾವನಾ ಸುಗಮ ಸಂಗೀತ ಬಳಗ ಸುಳ್ಯ ಇದರ ಅಧ್ಯಕ್ಷ ಕೆ. ಆರ್. ಗೋಪಾಲಕೃಷ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ರಾಮಚಂದ್ರ ಪಲ್ಲತ್ತಡ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ, ದಯಾನಂದ ಆಳ್ವ ಕಾರ್ಯದರ್ಶಿ, ಚಂದ್ರಮತಿ ಕೆ, ಕಾರ್ಯಕ್ರಮ ಸಂಯೋಜಕರಾದ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರಾದ ಗೋಪಿನಾಥ್ ಮೆತ್ತಡ್ಕ, ಗಾಯಕರಾದ ರಮ್ಯಾ ದಿಲೀಪ್ ಬಾಬ್ಲುಬೆಟ್ಟು, ಬಾಲಕೃಷ್ಣ ನೆಟ್ಟಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಸಾಪ ನಿರ್ದೇಶಕರಾದ ಗೋಪಿನಾಥ್ ಮೆತ್ತಡ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಸಾಪ ಕಾರ್ಯದರ್ಶಿ ಚಂದ್ರಮತಿ ಕೆ ವಂದಿಸಿದರು. ಕ.ಸಾ.ಪ ನಿರ್ದೇಶಕಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.