ಮುಂಬೈ: ನಾಯಕ ಪಫ್ ಡು ಪ್ಲೆಸಿಸ್(65 ರನ್, 41 ಎಸೆತ) ಹಾಗೂ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್(68 ರನ್, 33 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ಗೆ ಐಪಿಎಲ್ ಪಂದ್ಯದಲ್ಲಿ ಗೆಲುವಿಗೆ 200 ರನ್ ಗುರಿ ನೀಡಿದೆ. ಮುಂಬೈ ಇಂಡಿಯನ್ಸ್ 6 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ
ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.ಆರ್ಸಿಬಿಯ ಆರಂಭ ಉತ್ತಮವಾಗಿರಲಿಲ್ಲ. ವಿರಾಟ್ ಕೊಹ್ಲಿ(1 ರನ್), ಅನುಜ್ ರಾವತ್(6 ರನ್)ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆಗ ಜೊತೆಯಾದ ಡುಪ್ಲೆಸಿಸ್(65 ರನ್, 41 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಮ್ಯಾಕ್ಸ್ವೆಲ್(68 ರನ್, 33 ಎಸೆತ, 8 ಬೌಂಡರಿ, 4 ಸಿಕ್ಸರ್)ಮೂರನೇ ವಿಕೆಟ್ಗೆ 120 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ದಿನೇಶ್ ಕಾರ್ತಿಕ್(30 ರನ್, 18 ಎಸೆತ) ಹಾಗೂ ಕೇದಾರ್ ಜಾಧವ್(ಔಟಾಗದೆ 12, 10 ಎಸೆತ) 6ನೇ ವಿಕೆಟ್ಗೆ 39 ರನ್ ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ವನಿಂದು ಹಸರಂಗ(12)ಔಟಾಗದೆ ಉಳಿದರು. ಮುಂಬೈ ಪರ ಎಡಗೈ ವೇಗದ ಬೌಲರ್ ಜೇಸನ್ ಬೆಹ್ರೆನ್ಡಾರ್ಫ್(3-36)ಯಶಸ್ವಿ ಪ್ರದರ್ಶನ ನೀಡಿದರು. ಕ್ಯಾಮರೂನ್ ಗ್ರೀನ್(1-15), ಕುಮಾರ್ ಕಾರ್ತಿಕೇಯ(1-35) ಹಾಗೂ ಕ್ರಿಸ್ ಜೋರ್ಡನ್(1-48) ತಲಾ ಒಂದು ವಿಕೆಟ್ ಪಡೆದರು.