ಚೆನ್ನೈ: ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ವಿಕೆಟ್ ರೋಚಕ ಜಯ ದಾಖಲಿಸಿತು. ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 200 ರನ್ ಗಳಿಸಿತ್ತು. ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು ಮಾಡಿದ ಹೋರಾಟಕ್ಕೆ 4 ವಿಕೆಟ್ಗಳ ಜಯ ಒಲಿಯಿತು. ಲಿಯಾಮ್
ಲಿವಿಂಗ್ಸ್ಟೋನ್ (40; 24ಎಸೆತ) ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು.ಆಂತಿಮ ಓವರ್ನಲ್ಲಿ ತಂಡಕ್ಕೆ ಒಂಬತ್ತು ರನ್ಗಳ ಅಗತ್ಯವಿತ್ತು. ಬ್ಯಾಟರ್ಗಳಾದ ಸಿಕಂದರ್ ರಝಾ ಮತ್ತು ಶಾರೂಕ್ ಖಾನ್ ಅವರು ಐದು ಎಸೆತಗಳಲ್ಲಿ ಆರು ರನ್ಗಳನ್ನು ಗಳಿಸಿದರು.
ಇದರಿಂದಾಗಿ ಕೊನೆಯ ಎಸೆತದಲ್ಲಿ ಮೂರು ರನ್ಗಳನ್ನು ಗಳಿಸುವ ಸವಾಲು ಇತ್ತು. ಬ್ಯಾಟರಗಳು ಮೂರು ರನ್ ಪೂರೈಸಿ ಸಂಭ್ರಮ ಆಚರಿಸಿದರು.16ನೇ ಓವರ್ನಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ಲಿಯಾಮ್ ಲಿವಿಂಗ್ಸ್ಟೋನ್ ಪಂದ್ಯಕ್ಕೆ ತಿರುವು ನೀಡಿದರು. ಅದೊಂದೇ ಓವರ್ನಲ್ಲಿ 24 ರನ್ಗಳು ತಂಡದ ಖಾತೆ ಸೇರಿದವು. ಆ ಓವರ್ನ ಕೊನೆಯ ಎಸೆತದಲ್ಲಿ ಲಿಯಾಮ್ ಔಟಾದರು.
ಚೆನ್ನೈ ತಂಡದ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಅರ್ಧಶತಕ (52 ಎಸೆತಗಳಲ್ಲಿ 92) ವ್ಯರ್ಥವಾಯಿತು.