ಸಂಪಾಜೆ: ಸಂಪಾಜೆ ಗ್ರಾಮದಲ್ಲಿ ಉಂಟಾಗುತ್ತಿರುವ ನಿರಂತರ ವಿದ್ಯುತ್ ಸಮಸ್ಯೆ ಹಾಗೂ ಲೈನ್ ಮ್ಯಾನ್ಗಳ ಕೊರತೆಯ ಬಗ್ಗೆ ಸಂಪಾಜೆ ಮೂಲಭೂತ ಹಿತರಕ್ಷಣಾ ವೇದಿಕೆಯ ವತಿಯಿಂದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಪದ್ಮಾವತಿ ಅವರನ್ನು ಮಂಗಳೂರಿನ
ಕಚೇರಿಯಲ್ಲಿ ಭೇಟಿಯಾಗಿ ಸಮಸ್ಯೆ ಸರಿಪಡಿಸುವಂತೆ ಕೋರಿ ಮನವಿ ಮಾಡಲಾಯಿತು. ಇದಕ್ಕೆ ತಕ್ಷಣವೇ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕರು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ಸೂಚಿಸಿದರು. ಈ ಸಂದರ್ಭ ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಕೆ.ಪಿ.ಜಾನಿ, ಪ್ರಧಾನ ಕಾರ್ಯದರ್ಶಿ ವಸಂತ ಗೌಡ ಪೆಲ್ತಡ್ಕ, ಸದಸ್ಯರಾದ ಮಹಮ್ಮದ್ ಕುಂಞಿ ಗೂನಡ್ಕ, ಎ.ಕೆ.ಇಬ್ರಾಹಿಂ ಹಾಗೂ ಶೌವಾದ್ ಗೂನಡ್ಕರವರು ಉಪಸ್ಥಿತರಿದ್ದರು.