ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯುತ್ತಿದ್ದು ಇದರ ಅಂಗವಾಗಿ ಮಾಡದಲ್ಲಿ ದೈವಗಳ ಕೋಲ ನಡೆಯಿತು.ಏ.3ರಂದು ದೇವಳದಿಂದ ಉಳ್ಳಾಗುಳ ಭಂಡಾರ ಹೊರಟು ಮಾಡದಲ್ಲಿ ನೇಮ ನಡೆಯಿತು. ನಂತರ ಸೋಮಕೊಟ್ಯಕ್ಕೆ ತೆರಳಿ ತಂಬಿಲ, ಮಾಡಕ್ಕೆ ಹಿಂತಿರುಗಿ
ಕಿರಿಯರ ನೇಮ ಮತ್ತು ರುದ್ರ ಚಾಮುಂಡಿ ದೈವ ನಡೆಯಿತು.ಪೆರಾಜೆ ದೇವಸ್ಥಾನದ ಸಮೀಪ ಇರುವ ಮಾಡದಲ್ಲಿ ಎ.4ರಂದು ಸಂಜೆ 6 ರಿಂದ ಶ್ರೀ ಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ಕೋಲ ಹಾಗೂ ಶ್ರೀ ಕೊರಗ ತನಿಯ ದೈವದ ಕೋಲಗಳು ನಡೆಯಿತು.
ಇಂದು(ಎ.5) ಬೆಳಿಗ್ಗೆ 9 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ.ರಾತ್ರಿ 8ರಿಂದ ಶ್ರೀ ಕರಿಭೂತ ಕೋಮಾಳಿ ಮಾಮೂಲು ಕೋಲಗಳು ನಡೆಯಲಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ, ದೇವತಕ್ಕರಾದ ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದ
ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ ಪುರುಷೋತ್ತಮ ನಿಡ್ಯಮಲೆ. ಆಡಳಿತ ಸಮಿತಿ ಸದಸ್ಯರುಗಳು ಮತ್ತಿತರರು ಇದ್ದರು.