ಸುಳ್ಯ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಗೌರವ ಸಲಹೆಗಾರರಾಗಿ ಮಹೇಶ್ ಕುಮಾರ್ ಕರಿಕಳ, ಆನಂದ ಗೌಡ ಕಂಬಳ, ಉದಯಕುಮಾರ್ ಬೆಟ್ಟ, ಪರಮೇಶ್ವರ ಬಿಳಿಮಲೆ, ಉಮೇಶ್ ಬುಡೆಂಗಿ ಬಳ್ಪ ಇವರುಗಳನ್ನು ಈ ದಿನ ನಡೆದ
ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಡಾ.ದೇವಿ ಪ್ರಸಾದ ಕಾನತ್ತೂರ್ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ರಾಮಚಂದ್ರ ಭಟ್, ಸಂತೋಷ್ ಕುಮಾರ್ ರೈ ಬಳ್ಪ, ಧರ್ಮಪಾಲ ಗೌಡ ಕಾಚಿಲ ಮರಕಡ, ಧರ್ಮಣ್ಣ ನಾಯ್ಕ ಗರಡಿ, ಮಾಯಲಪ್ಪ ಗೌಡ ಎಣ್ಮೂರು, ಪವಿತ್ರ ಮಲ್ಲೇಟ್ಟಿ, ಹಾಗೂ ಮಾಲಿನಿ ಕುದ್ವ ಉಪಸ್ಥಿತರಿದ್ದರು