ಉಜಿರೆ: ಜನ ಬದಲಾವಣೆ ಬಯಸಿದ್ದಾರೆ. ಅಭಿವೃದ್ಧಿಯನ್ನು ಎದುರು ನೋಡುತ್ತಿರುವ ಜನತೆ, ಕಾಂಗ್ರೆಸ್ ಪರ ನಿಲ್ಲಲಿದ್ದಾರೆ. ಆದ್ದರಿಂದ ಕಾಂಗ್ರೆಸಿನ ಸೋಲಿನ ಸರಪಳಿ ಈ ಬಾರಿ ತುಂಡರಿಯಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಕಡೆ ನಡೆದ ರೋಡ್ ಶೋಗಳಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಈ ಭಾಗದಲ್ಲಿ ರಬ್ಬರ್ ಬೆಳೆಗಾರರು ಆತಂಕದಲ್ಲಿದ್ದಾರೆ. ಅದೇ ರೀತಿ ಈ ಭಾಗದ ರಸ್ತೆ ಅಭಿವೃದ್ಧಿಗಾಗಿ ಜಾಗ ಮನೆ ಹೋಗುವ ಆತಂಕ ಅನೇಕರಲ್ಲಿ ಇದೆ. ತಾನು ಲೋಕಸಭಾ ಸದಸ್ಯನಾದ ಬಳಿಕ ನಿಮ್ಮ ಜಾಗ, ಮನೆಗಳಿಗೆ
ಸರಿಯಾದ ದರ ಸಿಗುವಂತೆ ಮಾಡಿಕೊಡುವ ಜವಾಬ್ದಾರಿ ತನ್ನದು ಎಂದರು. ಕೆಪಿಸಿಸಿ ಪ್ರಧಾನ ರಕ್ಷಿತ್ ಶಿವರಾಂ,ವಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ,
ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಬಿ.ರಮಾನಾಥ ರೈ, ಮಾಜಿ ಸಚಿವ ಗಂಗಾಧರ ಗೌಡ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಡಿಸಿಸಿ ಪ್ರ. ಕಾರ್ಯದರ್ಶಿ ರಂಜನ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ, ನಾಗೇಶ್ ಗೌಡ, ಜಿಪಂ ಮಾಜಿ ಸದಸ್ಯೆ ನಮಿತಾ ಕೆ. ಪೂಜಾರಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಕೆಪಿಸಿಸಿ ವಕ್ತಾರ ಎಂ.ಜಿ. ಹೆಗ್ಡೆ, ಪ್ರತಿಭಾವಂತ ಕುಳಾಯಿ, ಶ್ಯಾಲೆಟ್ ಪಿಂಟೋ, ಶಕುಂತಳಾ ಗಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಧರ್ಣೇಂದ್ರ ಕುಮಾರ್, ವಂದನಾ ಭಂಡಾರಿ, ಲಕ್ಷ್ಮೀಶ್ ಗಬ್ಬಲಡ್ಕ, ಶೇಖರ್ ಕುಕೇಡಿ, ಅಶ್ರಫ್ ನೆರಿಯಾ ಮೊದಲಾದವರು ಉಪಸ್ಥಿತರಿದ್ದರು.
ನಾರಾವಿಯಿಂದ ಅಳದಂಗಡಿವರೆಗೆ ಹಾಗೂ ಅಳದಂಗಡಿಯ ಚುನಾವಣಾ ಪ್ರಚಾರ ಸಭೆಯ ಬಳಿಕ ಅಳದಂಗಡಿಯಿಂದ ಉಜಿರೆ ಹಾಗೂ ಉಜಿರೆಯಿಂದ ಕಕ್ಕಿಂಜೆವರೆಗೆ ರೋಡ್ ಶೋ ನಡೆಯಿತು. ತೆರೆದ ವಾಹನದಲ್ಲಿ ಅಭ್ಯರ್ಥಿ ಹಾಗೂ ಮುಖಂಡರು ತೆರಳಿದರೆ, ಅದನ್ನು ಅನುಸರಿಸಿ ಕಾರ್ಯಕರ್ತರು ಹಾಗೂ ಮುಖಂಡರು ದೊಡ್ಡ ಸಂಖ್ಯೆಯಲ್ಲಿ ಬೈಕ್ ಮೂಲಕ ಆಗಮಿಸಿದರು. ಇನ್ನೂ ಕೆಲವರು ಕಾರು, ಜೀಪ್ ಮೂಲಕ ರೋಡ್ ಶೋಗೆ ಮೆರುಗು ತಂದರು.
ಕೊಕ್ಕಡದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿದರು
ಕಲ್ಲೇರಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪದ್ಮರಾಜ್ ಮಾತನಾಡಿ
ಈ ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಗಳನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ. ಬಡವರು ಇಂದು ನೆಮ್ಮದಿಯಾಗಿ ಬದುಕಲು ಕಾಂಗ್ರೆಸ್ ನೀಡಿರುವ ಕೊಡುಗೆಗಳೇ ಕಾರಣ. ಇದೀಗ ಐದು ಗ್ಯಾರೆಂಟಿಗಳನ್ನು ರಾಜ್ಯ ಸರಕಾರ ನೀಡಿದೆ. ಕಾರ್ಯಕರ್ತರು ಧೈರ್ಯವಾಗಿ ಮತ ಕೇಳಬಹುದು ಎಂದರು.