ಸ್ಟಾಕ್ಹೋಮ್: ಕೋವಿಡ್–19 ಸೋಂಕು ನಿವಾರಣೆಗೆ ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಾದ ಕ್ಯಾಟಲಿನ್ ಕಾರಿಕೊ ಹಾಗೂ ಡ್ರ್ಯೂ ವೈಸ್ಮನ್ ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪುರಸ್ಕಾರ ದೊರೆತಿದೆ.ವಿಜ್ಞಾನ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದೇ ಕರೆಯಲಾಗುವ ಈ ಪ್ರಶಸ್ತಿಯ ಆಯ್ಕೆಯನ್ನು ಸ್ವೀಡನ್ನಲ್ಲಿರುವ
ಕ್ಯಾರೊಲಿನ್ಸ್ಕಾ ವೈದ್ಯಕೀಯ ವಿಶ್ವವಿದ್ಯಾಲಯ ನಡೆಸಿದೆ. ಪ್ರಶಸ್ತಿ ವಿಜೇತರಿಗೆ 8.31 ಕೋಟಿ ನಗದು ಬಹುಮಾನ ರೂಪದಲ್ಲಿ ಸಿಗಲಿದೆ.‘ಜಗತ್ತನ್ನೇ ಕಾಡಿದ ಕೋವಿಡ್–19ರ ಸೋಂಕು ನಿವಾರಣೆಗೆ ನ್ಯೂಕ್ಯಿಯೊಸೈಡ್ ಆಧಾರಿತ ಪರಿಣಾಮಕಾರಿಯಾದ ಎಂಆರ್ಎನ್ಎ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಕಾರಿಕೊ ಹಾಗೂ ವೈಸ್ಮೆನ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಹೀಗಾಗಿ 2023ರ ನೊಬೆಲ್ ಪುರಸ್ಕಾರವನ್ನು ಇವರಿಗೆ ನೀಡಲು ನಿರ್ಧರಿಸಲಾಗಿದೆ’ ಎಂದು ಆಯ್ಕೆ ಸಮಿತಿ ಹೇಳಿದೆ.
ಈ ವರ್ಷದ ನೊಬೆಲ್ ಪ್ರಶಸ್ತಿಯ ಘೋಷಣೆ ವೈದ್ಯಕೀಯ ಕ್ಷೇತ್ರದಿಂದ ಆರಂಭಗೊಂಡಿದೆ. ಉಳಿದ ಐದು ಪ್ರಶಸ್ತಿಗಳು ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿವೆ. ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿತ್ತು. ನಂತರ ಅರ್ಥಶಾಸ್ತ್ರ ಕ್ಷೇತ್ರಕ್ಕೂ ನೊಬೆಲ್ ಪುರಸ್ಕಾರವನ್ನು ವಿಸ್ತರಿಸಲಾಯಿತು.
ನೊಬೆಲ್ ಅವರ 10ನೇ ಪುಣ್ಯ ಸ್ಮರಣೆಯಲ್ಲಿ ಡಿ. 10ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆಯಲಿದೆ.