ಸುಳ್ಯ:ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಸುಳ್ಯ ಎನ್. ಎಂ.ಪಿ.ಯು. ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 91 ವಿದ್ಯಾರ್ಥಿಗಳಲ್ಲಿ 90 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 99 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ
![](https://thesulliamirror.com/wp-content/uploads/2023/04/IMG-20230421-WA0040.jpg)
ಮನು ಎಸ್ ನಾಯಕ್
![](https://thesulliamirror.com/wp-content/uploads/2023/04/IMG-20230421-WA0041.jpg)
ಸೌಧ
![](https://thesulliamirror.com/wp-content/uploads/2023/04/IMG-20230421-WA0039.jpg)
ರಾಶಿ
44 ವಿದ್ಯಾರ್ಥಿಗಳಲ್ಲಿ 43 ಉತ್ತೀರ್ಣರಾಗಿ ಶೇ. 97.73, ವಾಣಿಜ್ಯ ವಿಭಾಗದ 37 ವಿದ್ಯಾರ್ಥಿಗಳಲ್ಲಿ 37 ಮಂದಿಯೂ ಉತ್ತೀರ್ಣರಾಗಿ ಶೇ 100 ಮತ್ತು ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 10 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದ ಸೌಧ ಕೆ. 570, ವಾಣಿಜ್ಯ ವಿಭಾಗದ ರಾಶಿ ಡಿ.ಡಿ. 553 ಮತ್ತು ಕಲಾ ವಿಭಾಗದ ಮನು ಎಸ್. ನಾಯ್ಕ 541 ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ. ಅತ್ಯುತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.