ಸುಳ್ಯ: ಧ್ವನಿ ಬೆಳಕು ಮತ್ರು ಶಾಮಿಯಾನ ಮಾಲಕರ ಸಂಘದ 8ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ‘ಎ ಗ್ರೇಡ್’ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ನ.17 ಮತ್ತು 18ರಂದು ಸುಳ್ಯದ ಪ್ರಭು ಮೈದಾನದಲ್ಲಿ ನಡೆಯಲಿದೆ. ರಾಷ್ಟ್ರೀಯ ಮಟ್ಟದ 8 ಆಹ್ವಾನಿತ ತಂಡಗಳು
ಭಾಗವಹಿಸಲಿದೆ. ಕರ್ನಾಟಕ, ಕೇರಳ,ತಮಿಳುನಾಡು, ಮಹಾರಾಷ್ಟ್ರ ಹಿಮಾಚಲ ಪ್ರದೇಶ ಮತ್ತಿತರ ರಾಜ್ಯಗಳ 8 ತಂಡಗಗಳು ಭಾಗವಹಿಸಲಿದ್ದು ಪ್ರೊ ಕಬಡ್ಡಿ ಹಾಗೂ ರಾಷ್ಟ್ರೀಯ ಕಬಡ್ಡಿ ತಂಡದ ಆಟಗಾರರು ಭಾಗವಹಿಸಲಿದ್ದಾರೆ. ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ಪಂದ್ಯಾಟದ ಕಚೇರಿ ಕಾರ್ಯಾರಂಭ ಮಾಡಿದೆ. ಆಕರ್ಷಕ ಕ್ರೀಡಾಂಗಣ, ವೀಕ್ಷಣೆಗೆ ಸುಸಜ್ಜಿತ ಗ್ಯಾಲರಿ ವ್ಯವಸ್ಥೆ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನವೀನ ಮಾದರಿಯ ಬೆಳಕಿನ ವ್ಯವಸ್ಥೆ, ಡಿಜಿಟಲ್ ತಂತ್ರಜ್ಞಾನದ ಸೌಂಡ್ ಸಿಸ್ಟಂ ಇರಲಿದೆ. ಚಲನಚಿತ್ರ ತಾರೆಯರು, ಸಚಿವರುಗಳು ಆಗಮಿಸಲಿದ್ದಾರೆ. ಕ್ರೀಡಾ ಹಬ್ಬಕ್ಕೆ ಕ್ರೀಡಾಂಗಣದ ತಯಾರಿ ಮತ್ತಿತರ ಸಿದ್ಧತೆಗಳು ಆರಂಭಗೊಂಡಿದೆ ಎಂದು ಸಂಘಟಕರು ತಿಳಿಸಿದ್ದಾರೆ.