ಮಂಗಳೂರು:ರಾಜ್ಯದ ಮತ್ತು ದೇಶದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಕೊಳ್ನಾಡಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಸುಸ್ಥಿರ ಸರಕಾರ, ದೇಶದಲ್ಲಿ ಕರ್ನಾಟಕ ರಾಜ್ಯ ವನ್ನು ನಂಬರ್ ಒನ್ ಸ್ಥಾನಕ್ಕೆ ಏರಿಸುವುದು ನಮ್ಮ ಗುರಿ. ಕೃಷಿ, ಮೀನುಗಾರಿಕೆ, ಶಿಕ್ಷಣ,ಆರೋಗ್ಯ,ಅಭಿವೃದ್ಧಿ ಕ್ಷೇತ್ರದಲ್ಲಿ
ನಂಬರ್ ಒನ್ ಮಾಡುವುದು ಬಿಜೆಪಿ ಗುರಿಯಾಗಿದೆ.ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ರಿವರ್ಸ್ ಗೇರ್ ನಲ್ಲಿ ಸಾಗುತ್ತದೆ. ಸುಸ್ಥಿರ ಸರಕಾರ ಅವರಿಂದ ಸಾಧ್ಯವಿಲ್ಲ ಎಂದ ಅವರು ದೇಶದ ಪ್ರಜಾಪ್ರಭುತ್ವ, ಅಭಿವೃದ್ಧಿ ವಿಶ್ವದ ಪ್ರಶಂಸೆಗೆ ಪಾತ್ರ ವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಸಂಸದೆ ಶೋಬಾ ಕರಂದ್ಲಾಜೆ, ಸಚಿವ ಸುನಿಲ್ ಕುಮಾರ್, ಶಾಸಕ ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್,ವೇದವ್ಯಾಸ ಕಾಮತ್,ಹರೀಶ್ ಪೂಂಜಾ,ಪ್ರತಾಪ್ ಸಿಂಹ ನಾಯಕ್ ,ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಳಾದ ಭಾಗೀರಥಿ ಮುರುಳ್ಯ, ಆಶಾ ತಿಮ್ಮಪ್ಪ , ಸತೀಶ್ ಕುಂಪಲ, ಯಶ್ಫಾಲ್ ಸುವರ್ಣ, ಉಪಸ್ಥಿತರಿದ್ದರು.