ಸುಳ್ಯ:ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಇದರ ಸಹಯೋಗದೊಂದಿಗೆ ರಾಜ್ಯದಾದ್ಯಂತ ಪ್ರಯಾಣಿಸುತ್ತಿರುವ ನಂದಿ ರಥಯಾತ್ರೆ ಮಾ.15ರಂದು ಸುಳ್ಯಕ್ಕೆ ಆಗಮಿಸಲಿದೆ. ಈ ಸಂದರ್ಭದಲ್ಲಿ ನಂದಿ ರಥಯಾತ್ರೆಗೆ ಭವ್ಯ ಸ್ವಾಗತ ನೀಡಲಾಗುವುದು. ಇದರ ಅಂಗವಾಗಿ ವಿವಿಧ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಮಾ.15ರಂದು ಬೆಳಿಗ್ಗೆ ಸುಬ್ರಹ್ಮಣ್ಯದಿಂದ ಹೊರಡುವ ರಥಯಾತ್ರೆಗೆ ವಿವಿಧ ಕಡೆ ಸ್ವಾಗತ, ನಂದಿ ಪೂಜೆ ನಡೆಯಲಿದೆ.ಮಧ್ಯಾಹ್ನ ಎಲಿಮೆಲೆಯಲ್ಲಿ ವಿಶ್ರಾಂತಿ ಪಡೆದು ಸಂಜೆ 3.45ರ ವೇಳೆಗೆ ಸುಳ್ಯದ ಶಾಸ್ತ್ರಿ ವೃತ್ತಕ್ಕೆ ಆಗಮಿಸಲಿದೆ. ಅಲ್ಲಿ ನಂದಿ ರಥವನ್ನು ಸ್ವಾಗತಿಸಿ ಭವ್ಯ ಶೋಭಾಯಾತ್ರೆಯ ಮೂಲಕ ಶ್ರೀ ಚನ್ನಕೇಶವ ದೇವಸ್ಥಾನದ ಬಳಿಗೆ ರಥವನ್ನು ಕರೆ ತರಲಾಗುವುದು.ಅಲ್ಲಿ ನಂದಿ ಪೂಜೆ, ಸಭಾ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ನ ಅಧ್ಯಕ್ಷ ಭಕ್ತಿಭೂಷಣ್ ದಾಸ್, ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿ, ಒಡ್ಡೂರು ಫಾರ್ಮ್ ಅವರು ಭಾಗವಹಿಸಲಿದ್ದಾರೆ.
ಪೊಳಲಿ ಕ್ಷೇತ್ರದಿಂದ ಡಿಸೆಂಬರ್ 31 ರಂದು ಪ್ರಾರಂಭಗೊಂಡು ರಾಜ್ಯದಾದ್ಯಂತ ಪ್ರಯಾಣಿಸುತ್ತಿರುವ ರಥಯಾತ್ರೆಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ ನೀಡಲು ಎಲ್ಲಾ ಸಿದ್ಧತೆಗಳು ನಡೆಸಲಾಗಿದೆ. ಸ್ವದೇಶಿ ವಸ್ತುಗಳು, ಸ್ವದೇಶಿ ಉತ್ಪನ್ನಗಳ ಬಳಕೆ ಹಾಗೂ ಗೋವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಗೋವು ಮತ್ತು ನಂದಿಯನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ನಂದಿಯಾತ್ರೆ ನಡೆಯುತಿದೆ.