ಹೈದರಾಬಾದ್: ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 14 ರನ್ ಅಂತರದಿಂದ ಮಣಿಸಿತು.
ಗೆಲ್ಲಲು 193 ರನ್ ಗುರಿ ಪಡೆದ ಹೈದರಾಬಾದ್ 19.5 ಓವರ್ಗಳಲ್ಲಿ 178 ರನ್ಗೆ ಆಲೌಟಾಯಿತು.ಹೈದರಾಬಾದ್ ಪರ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್(48 ರನ್, 41 ಎಸೆತ)ಸರ್ವಾಧಿಕ ಸ್ಕೋರ್
ಗಳಿಸಿದರು. ಹೆನ್ರಿಕ್ ಕ್ಲಾಸೆನ್(36 ರನ್, 16 ಎಸೆತ) ಹಾಗೂ ನಾಯಕ ಏಡೆನ್ ಮರ್ಕ್ರಮ್(22 ರನ್, 17 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಮುಂಬೈ ಪರ ರಿಲೆ ಮೆರೆಡೆತ್(2-33), ಜೇಸನ್ ಬೆಹ್ರೆನ್ಡಾರ್ಫ್(2-37) ಹಾಗೂ ಪಿಯೂಷ್ ಚಾವ್ಲಾ(2-43)ತಲಾ ಎರಡು ವಿಕೆಟ್ ಪಡೆದರು. ಅರ್ಜುನ್ ತೆಂಡುಲ್ಕರ್ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.
ಕಾಮರೂನ್ ಗ್ರೀನ್ ( ಔಟಾಗದೆ 64; 40 ಎ) ನಾಯಕ ರೋಹಿತ್ ಶರ್ಮಾ (28; 18ಎಸೆತ, 4X6) ಇಶಾನ್ ಕಿಶನ್ (38; 31ಎ, 4X3, 6X2) ತಿಲಕ್ ವರ್ಮಾ (37; 17ಎ, 4X2, 6X4) ಉತ್ತಮ ರನ್ ಕಲೆ ಹಾಕಿದರು.