ಸುಳ್ಯ:ಮೊಗರ್ಪಣೆ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಅವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸುತಿರುವ ಉರೂಸ್ ಸಮಾರಂಭದ ಮೂರನೇ ದಿನವಾದ ಜ.14 ರಂದು ಧಾರ್ಮಿಕ ಮತ ಪ್ರವಚನ ಹಾಗೂ ದುವಾಃ ಕಾರ್ಯಕ್ರಮ ನಡೆಯಿತು. ಸೈಯ್ಯದ್ ಝೈನುಲ್ ಆಬಿದೀನ್ ತಂಙಳ್ ಜಯನಗರ ದುವಾ ನೇತೃತ್ವ ವಹಿಸಿದ್ದರು. ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿ ಮಾತಾನಾಡಿದ ಅಬ್ದುಲ್ ರಶೀದ್ ಸಖಾಫಿ ಏಲಂಕುಲಂ ಶ್ರೀಮಂತಿಕೆ ಮತ್ತು ಆರ್ಥಿಕ ಅಭಿವೃದ್ಧಿ ಮನುಷ್ಯನಿಗೆ
ನೆಮ್ಮದಿ , ಸ್ವಸ್ಥ ಜೀವನ ಹಾಗೂ ಸಮಾಧಾನವನ್ನು ನೀಡಲು ಸಾದ್ಯವಿಲ್ಲ. ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಲು ಅಲ್ಲಾಹುವಿನ ಧ್ಯಾನ ಮತ್ತು ಪ್ರಾರ್ಥನೆಯಿಂದ ಮಾತ್ರ ಸಾಧ್ಯ. ಎಷ್ಟೇ ಕಷ್ಟಗಳು, ಪರೀಕ್ಷೆಗಳು ಎದುರಾದರೂ ನೋವುಗಳು ಕಷ್ಟಗಳು ಬಂದರೂ ಅಲ್ಲಾಹುವಿನ ಪ್ರಾರ್ಥನೆ, ಧರ್ಮ ಆಚರಣೆ ಮತ್ತು ಅನುಷ್ಠಾನದಲ್ಲಿ ರಾಜಿ ಮಾಡಬಾರದು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಉರೂಸ್ ಕಮೀಟಿ ಕನ್ವೀನರ್ ಅಬ್ದುಲ್ ರಝಾಕ್ ಶೀತಲ್, ಮೊಗರ್ಪಣೆ ಜುಮಾ ಮಸ್ಜಿದ್ ಮುದರ್ರಿಸ್ ಹಾಫಿಝ್ ಶೌಕತ್ತಲಿ ಸಖಾಫಿ ಉಸ್ತಾದ್, ಮದರಸ ಸದರ್ ಉಸ್ತಾದರಾದ ಕರೀಮ್ ಸಖಾಫಿ, ಶಫೀಕ್ ಹಿಮಮಿ ಉಸ್ತಾದ್, ಯೂಸುಫ್ ನಿಝಾಮಿ ಉಸ್ತಾದ್, ನಾಸಿರ್ ಸಖಾಫಿ ಉಸ್ತಾದ್, ಸಿದ್ದೀಕ್ ಸಹದಿ ಉಸ್ತಾದ್, ಮುಅಝ್ಝಿನ್ ಮೂಸಾ ಉಸ್ತಾದ್, ಹಂಝ ಸಖಾಫಿ ಉಸ್ತಾದ್, ದಫ್ ಅಸೋಸಿಯೇಷನ್ ಅಧ್ಯಕ್ಷ ಜಲೀಲ್, ಜಮಾಅತ್ ಕಮಿಟಿ ಸದಸ್ಯ ಹಾಜಿ ಎಸ್ ಎ ಎಸ್ ಮಹಮ್ಮದ್ ಜಟ್ಟಿಪಳ್ಳ, ಅಬ್ದುಲ್ ಖಾದರ್ ಮುಂತಾದವರು ಉಪಸ್ಥಿತರಿದ್ದರು.
ಅಬ್ದುಲ್ ರಶೀದ್ ಝೈನಿ ಉಸ್ತಾದ್ ಸ್ವಾಗತಿಸಿ, ಕರೀಮ್ ಸಖಾಫಿ ಉಸ್ತಾದ್ ವಂದಿಸಿದರು.