ಸುಳ್ಯ: ಇಂದು ನಡೆದ ಲೋಕಸಭಾ ಚುನಾವಣೆ ಸಂದರ್ಭ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಅವರು ವಿವಿಧ ಬೂತ್ ಗಳನ್ನ ಸಂಪರ್ಕಿಸಿ ಕಾರ್ಯಕರ್ತರನ್ನು, ಮುಖಂಡರನ್ನು ಭೇಟಿಯಾದರು. ತನ್ನ ಸ್ವಗ್ರಾಮ ಮುರುಳ್ಯದಿಂದ ಪ್ರವಾಸ ಆರಂಭಿಸಿದ ಶಾಸಕರು
ಕಡಬ ತಾಲೂಕು, ಸುಳ್ಯ ತಾಲೂಕು ಸೇರಿ 83 ಬೂತ್ ಗಳನ್ನು ಭೇಟಿ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು ಜನರು ಉತ್ಸಾಹದಿಂದ ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಕಾರ್ಯಕರ್ತರ ಉತ್ಸಾಹ, ಮತದಾರರ ಒಲವೂ ಬಿಜೆಪಿ ಕಡೆಗಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರ ಗೆಲುವು ಖಚಿತ , ಪ್ರಧಾನಿ ಮೋದಿಯವರು ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರವಾಸ ಸಂದರ್ಭದಲ್ಲಿ ಮುರುಳ್ಯ -ಎಣ್ಮೂರು
ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅನೂಪ್ ಅಳ್ವಾ,ಜಿಲ್ಲಾ ಸಾಮಾಜಿಕ ಜಾಲಾತಾಣ ಸದಸ್ಯ ಪ್ರಸಾದ್ ಕಾಟೂರು ಜೊತೆಗಿದ್ದರು.