ಸುಳ್ಯ:ಲೋಕಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯಿತು.ಸುಳ್ಯದ 233 ಬೂತ್ಗಳಲ್ಲಿ ಬೆಳಿಗ್ಗಿನಿಂದ ಬಿರುಸಿನ ಮತದಾನ ನಡೆದಿದೆ. ಕ್ಷೇತ್ರದಲ್ಲಿ ಶೇ.83 ಮತದಾನ ದಾಖಲಾಗಿದೆ. 2.08,853 ಮತದಾರರ ಪೈಕಿ 1,73,354 ಮತದಾರರು ಮತ ಚಲಾಯಿಸಿದರು. ವಿವಿಧ ಬೂತ್ಗಳಲ್ಲಿ ಬೆಳಿಗ್ಗೆ 7 ರಿಂದಲೇ
ಉದ್ದನೆಯ ಸರತಿ ಸಾಲು ಕಂಡು ಬಂದಿತ್ತು. ಬಿಸಿಲ ಬೇಗೆ, ಏರಿದ ಸೆಕೆಯನ್ನೂ ಲೆಕ್ಕಿಸದೆ ಮತದಾರರು ಮತಗಟ್ಟೆಗಳಿಗೆ ಹರಿದು ಬಂದರು. ಸರತಿ ಸಾಲಿನಲ್ಲಿ ನಿಂತು ಅತ್ಯುತ್ಸಾಹದಿಂದ ಮತದಾರರು ಮತ ಚಲಾಯಿಸಿದರು. ಆರಂಭದಲ್ಲಿ ಮತದಾನ ಯಂತ್ರದ ಕೆಲವೊಂದು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಹೊರತು ಪಡಿಸಿದರೆ ಚುನಾವಣೆ ಸುಸೂತ್ರವಾಗಿ ನಡೆಯಿತು. ಎಲ್ಲಾ ಬೂತ್ಗಳ ಸಮೀಪ ಕಾಂಗ್ರೆಸ್ ಹಾಗೂ
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬೂತ್ಗಳಲ್ಲಿ
ಲಬಿಜೆಪಿ ಕಾರ್ಯಕರ್ತರು ಚುನಾವಣಾ ಬೂತ್ಗಳನ್ನು ತೆರೆದು ಮತ ಯಾಚನೆ ಮಾಡಿದರು. ಕ್ಷೇತ್ರದಾದ್ಯಂತ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಮತದಾರರು ಅತ್ಯುತ್ಸಾಹದಿಂದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದರು.ಸುಳ್ಯ
ವಿಧಾನಸಭಾ ಕ್ಷೇತ್ರದಲ್ಲಿ 177 ಬೂತ್ಗಳಲ್ಲಿ ವೆಬ್ ಕಾಸ್ಟಿಂಗ್ ನಡೆಸಲಾಗಿತ್ತು. 5 ಸಖಿ ಮತಗಟ್ಟೆಗಳು, ತಲಾ ಒಂದು
ಬಿಜೆಪಿ ಕಾರ್ಯಕರ್ತರ ಉತ್ಸಾಹ
ಯುವ, ಪಿಡಬ್ಲ್ಯಡಿ, ಧ್ಯೆಯ, ಸಾಂಪ್ರದಾಯಿಕ ಮತಗಟ್ಟೆಗಳಿತ್ತು.ವಿಶೇಷವಾಗಿ ಅಲಂಕರಿಸಿದ ಈ ಮತಗಟ್ಟೆಗಳು ಗಮನ ಸೆಳೆದಿತ್ತು. ಮಾದರಿ ಮತಗಟ್ಟೆಗಳಲ್ಲಿ ದಿನ ಪೂರ್ತಿ ಉತ್ಸಾಹ ಕಂಡು ಬಂದಿದ್ದು
18 ಕ್ರಿಟಿಕಲ್ ಬೂತ್ಗಳಲ್ಲೂ ಬಿರುಸಿನ ಮತದಾನ:
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಕ್ಸಲ್ ಬಾದಿತ ಮತ್ತಿತರ 18 ಕ್ರಿಟಿಕಲ್ ಬೂತ್ಗಳಲ್ಲಿಯೂ ಬಿರುಸಿನ ಮತದಾನ ನಡೆಯಿತು. ಈ ಬೂತ್ಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.