ಉಪ್ಪಿನಂಗಡಿ: ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣಗಳ ಒಕ್ಕೂಟ (ಮೀಫ್ )ಇದರ ಆಶ್ರಯ ದಲ್ಲಿ ಎಲ್ ಕೆ ಜಿ, ಯು ಕೆ ಜಿ ಫ್ರೀ ಕೆಜಿ ಶಿಕ್ಷಕರುಗಳಿಗೆ ಏಕ ದಿನ ಮೊಂಟೆಸ್ಸರಿ ತರಬೇತಿ ಶಿಬಿರ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಆಡಿಟೋರಿಯನಲ್ಲಿ ನಡೆಯಿತು. ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಬಿ. ಎಸ್. ರವಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ವಹಿಸಿದ್ದರು ಉಪಾಧ್ಯಕ್ಷ ಕೆ. ಎಂ. ಮುಸ್ತಫ ವಿಷಯ ಮಂಡನೆ ಮಾಡಿದರು ಮುಖ್ಯ ಅತಿಥಿಗಳಾಗಿ
ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಅಧ್ಯಕ್ಷ ಯೂಸುಫ್ ಹಾಜಿ, ಸಂಚಾಲಕ ಶುಕೂರ್ ಹಾಜಿ, ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಜ್ ಟ್ಯಾಲೆಂಟ್, ಯೋಜನಾ ನಿರ್ದೇಶಕ ಶಾರಿಕ್,, ಕಾರ್ಯಕ್ರಮ ಸಂಯೋಜಕರುಗಳಾದ ಶೇಖ್ ರಹ್ನತುಲ್ಲಾ ಬುರೂಜಿ, ಮನ್ ಶರ್ ವಿದ್ಯಾಲಯದ ಪ್ರಾoಶುಪಾಲ ಹೈದರ್ ಮರ್ಧಾಳ, ಇಂಡಿಯನ್ ಸ್ಕೂಲ್ ಮುಖ್ಯೊಪಾದ್ಯಾ ಯಿನಿ ಸಂಶಾದ್ ಬೇಗo, ಮೊದಲಾದವರು ಉಪಸ್ಥಿತರಿದ್ದರು
ಮಂಗಳೂರಿನ ಯೇನೆಪೋಯ ಅಕ್ಷರ ಹೌಸ್ ಅಫ್ ಚಿಲ್ದ್ರನ್ಸ್ ತರಬೇತಿ ಸಂಸ್ಥೆಯ ನುರಿತ ತರಬೇತುದಾರರು ಮೀಫ್ ಸಹಬಾಗಿತ್ವದಲ್ಲಿ ಕುಂದಾಪುರ, ಮಂಗಳೂರು ಗಳಲ್ಲಿ ಸರಣಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಇದರ ಉದ್ಘಾಟನೆ ಇಂದು ಉಪ್ಪಿನಂಗಡಿಯಲ್ಲಿ ಜರಗಿತು
ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಫಾತಿಮ ಶಮೀನ, ದೀಪಾ, ಸ್ಮಿತಾ ಮೊದಲಾದವರ ತಂಡ ಪ್ರಾತ್ಯಕ್ಷಿಕೆ ಯೊಂದಿಗೆ, ಆಧುನಿಕ ಕಲಿಕಾ ವಿಧಾನ, ಮಕ್ಕಳ ವ್ಯಕ್ತಿತ್ವ ವಿಕಸನ, ಮಾನಸಿಕ ದೈಹಿಕ ಆರೋಗ್ಯ, ಪಠ್ಯ, ಇತರ ವಿಷಯಗಳ ಬಗ್ಗೆ ಪರಿಣಾಮಕಾರಿ ತರಬೇತಿ ನೀಡಿದರು. ಮೀಫ್ ಪೂರ್ವ ವಿಭಾಗದ ಸುಳ್ಯ, ಕಡಬ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳ 160 ಕ್ಕೂ ಮಿಕ್ಕಿದ ಶಿಕ್ಷಕರು ಶಿಬಿರದಲ್ಲಿ ಭಾಗವಹಿಸಿದ್ದರು