ಸುಳ್ಯ:ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಯಮಂಡಲ ಮಹಿಳಾ ಮೋರ್ಚಾದ ಸಭೆಯು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಮಹಿಳಾ ಮೋರ್ಚದ ಜಿಲ್ಲಾಧ್ಯಕ್ಷೆ ಡಾ. ಮಂಗಳ , ಮಹಿಳಾ ಪ್ರಮುಖರಾದ ಕಸ್ತೂರಿ ಪಂಜ, ಧನಲಕ್ಷ್ಮಿ ಗಟ್ಟಿ, ಮಂಡಲ ಪ್ರಭಾರಿ ಯಶಸ್ವಿನಿ, ಜಿಲ್ಲಾ
ಉಪಾಧ್ಯಕ್ಷೆ ಗುಣವತಿ ಕೊಳ್ಳಂತಡ್ಕ, ಜಾಹ್ನವಿ ಕಾಂಚೊಡು, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿ ಗ್ರಾಮದಲ್ಲೂ ಮಹಿಳಾ ತಂಡದ ವತಿಯಿಂದ ಚುನಾವಣಾ ಪ್ರಚಾರ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಶಶಿಕಲಾ ಕಾರ್ಯಕ್ರಮ ನಿರ್ವಹಿಸಿದರು. ನೂರಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು