ಮಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಪ್ರಕ್ರಿಯೆ ವಿವಿಧ ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಸಲಾಗುತಿದೆ. 9 ಗಂಟೆಯ ವೇಳೆಗೆ ಮುನ್ನಡೆಯ ಚಿತ್ರಣ ದೊರೆಯಲಿದೆ. 12 ಗಂಟೆಯ ವೇಳೆಗೆ
ಚಿತ್ರಣ ಸ್ಪಷ್ಟವಾಗಲಿದೆ.
ಬೆಳಿಗ್ಗೆ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್ಗಳನ್ನು ತೆರೆಯಲಾಯಿತು.
ಮೊದಲು ಅಂಚೆ ಮತಪತ್ರಗಳು ಹಾಗೂ ಆನಂತರ ವಿದ್ಯುನ್ಮಾನ ಮತಯಂತ್ರಗಳ ಕೊಠಡಿಗಳನ್ನು ತೆಗೆಯಲಾಯಿತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸುರತ್ಕಲ್ ನ ಎನ್.ಐ.ಟಿ.ಕೆ ಯಲ್ಲಿ ಆರಂಭಗೊಂಡಿದೆ. 543 ಲೋಕಸಭಾ ಕ್ಷೇತ್ರಗಳ ಚುನಾವಣೆ 7 ಹಂತದಲ್ಲಿ ನಡೆದಿತ್ತು.