ಸುಳ್ಯ:ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಂದರ ಮೇರ ಅವರ ಚುನಾವಣಾ ಕಚೇರಿ ಸುಳ್ಯದ ಕೇರ್ಪಳದಲ್ಲಿ ಉದ್ಘಾಟನೆಗೊಂಡಿತು. ಹಿರಿಯರಾದ ರಾಮಣ್ಣ ಕೊಳಂಬೆ ಕಚೇರಿಯನ್ನು ದೀಪ ಬಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಂದರ ಮೇರ ‘ಸುಳ್ಯದ ಮೂಲಭೂತ
ಸಮಸ್ಯೆಗಳ ಆಳ ತಿಳಿದು ಪರಿಹರಿಸಲು ಪ್ರಯತ್ನ ನಡೆಸಲಾಗುವುದು. ಶಾಸಕರಾಗಿ ಆಯ್ಕೆಯಾದರೆ ಅಭಿವೃದ್ಧಿಯಲ್ಲಿ ಮಾದರಿ ಸುಳ್ಯ ನಿರ್ಮಾಣ ಮಾಡುವ ಗುರಿ ಇದೆ ಎಂದು ಹೇಳಿದರು. ಸುಳ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಇನ್ನೂ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.
ಪ್ರಮುಖರಾದ ಅಶೋಕ್ ಕೊಂಚಾಡಿ, ಸುಂದರ ನಿಡ್ಪಳ್ಳಿ, ಬುದ್ಧ ಸಂಕೇಶ, ವಸಂತ ಕೊಂಚಾಡಿ, ಅಭಿಷೇಕ್ ಎಂ.ಜಿ, ಕರುಣಾಕರ ಪಲ್ಲತಡ್ಕ, ಸೀತಾರಾಮ ಕೊಂಚಾಡಿ, ರಾಮದಾಸ್ ಮೇರಮಜಲು, ಕೃಷ್ಣ ಜಟ್ಟಿಪಳ್ಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಶೋಕ್ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು.